ಕೃಷಿ ಕಾಯ್ದೆ ಸುಟ್ಟು ಪ್ರತಿಭಟನೆ

ಕಲಬುರಗಿ,ಜೂ.5-ಕಿಸಾನ್ ಸಂಯುಕ್ತ ಮೋರ್ಚಾ ಕರೆಯ ಮೇರೆಗೆ “ಕೃಷಿಯನ್ನು ಉಳಿಸಿ, ಕಾರ್ಪೊರೇಟ್ ಉದ್ಯಮಿಗಳನ್ನು ಹೊರಗಟ್ಟಿ” ಎಂಬ ಘೋಷಣೆಯೊಂದಿಗೆ ನಗರದ ಇಂದಿರಾ ಸ್ಮಾರಕ ಭವನದ ಮುಂದೆ ಇರುವ ಜಯಪ್ರಕಾಶ ನಾರಾಯಣ ಅವರ ಪ್ರತಿಮೆ ಮುಂದೆ ಇಂದು ಕೃಷಿ ಕಾಯ್ದೆಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು.
ಕಳೆದ ವರ್ಷ ಇದೇ ದಿನದಂದು ಕರಾಳ ಕೃಷಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಪಾಸ್ ಮಾಡಲಾಯಿತು. ಆದ್ದರಿಂದ ದೇಶದಾದ್ಯಂತ ಇಂದು ಈ ಕಾಯ್ದೆಗಳನ್ನಜ್ ಸುಟ್ಟು ಪ್ರತಿಭಟಿಸಲಾಗುತ್ತಿದೆ. ಅದರಂತೆ ಇಂದಿನ ದಿನವೇ 1974 ರಲ್ಲಿ ಜಯಪ್ರಕಾಶ ನಾರಾಯಣ ಅವರು “ಅಂದಿನ ಸರ್ಕಾರದ ವಿರುದ್ಧ “ಸಂಪೂರ್ಣ ಕ್ರಾಂತಿ”ಗೆ ಕರೆಯನ್ನು ನೀಡಿದ್ದರು. ಆದ್ದರಿಂದ ಕಿಸಾನ್ ಸಂಯುಕ್ತ ಮೋರ್ಚಾ ಇಂದಿನ ದಿನವನ್ನು ಸಂಪೂರ್ಣ ಕ್ರಾಂತಿಯ ದಿನವೆಂದು ಕರೆ ನೀಡಿ, ಪ್ರತಿಭಟನೆ ನಡೆಸಿತು.
ಮಾಜಿ ಶಾಸಕ ಬಿ.ಆರ್.ಪಾಟೀಲ್, ಮಹೇಶ್ ಎಸ್. ಬಿ., ಭೀಮಾಶಂಕರ್ ಮಾಡ್ಯಾಳ್, ಕೆ. ನೀಲಾ, ಶ್ರೀಮಂತ್ ಬಿರಾದಾರ್, ಉಮಾಪತಿ ಮಾಲಿಪಾಟೀಲ್, ಶೌಕತ್ ಅಲಿ ಆಲೂರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.