ಕೃಷಿ ಕಾಯ್ದೆ ವಿರೋಧಿಸಿ ಸಂಸದರ ಪ್ರತಿಭಟನೆ


ನವದೆಹಲಿ,ಜು.೨೨-ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಸತ್ ಆವರಣದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್‌ಗಾಂಧಿ ಇನ್ನಿತರ ಕಾಂಗ್ರೆಸ್ ಸಂಸದರು ಇಂದು ಪ್ರತಿಭಟನೆ ನಡೆಸಿದರು.
ರೈತರ ಆಂದೋಲನಕ್ಕೆ ಸಂಂಧಿ ಸಿದಂತೆ ರಾಜ್ಯಸಭೆಯಲ್ಲಿ ದೀಪೇಂದ್ರ ಸಿಂಗ್ ಹೂಡಾ ಮತ್ತು ಪ್ರತಾಪ್‌ಸಿಂಗ್ ಭಜ್ವಾ ಅವರು ನೋಟಿಸ್‌ನ್ನು ಅಮಾನತುಗೊಳಿಸಿದ್ದಾರೆ. ಈ ಮಧ್ಯೆ ಕಳೆದ ೬ ತಿಂಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಇತರ ಪಕ್ಷಗಳ ವಿರೋಧದ ನಡುವೆಯೂ ಧ್ವನಿ ಮತದಿಂದ ಅಂಗೀಕರಿಸಿರುವ ಮೂರು ಕಾನೂನುಗಳನ್ನು ರದ್ದುಪಡಿಸುವಂತೆ ಇಂದೂ ಸಹ ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.
ಪ್ರಸ್ತುತ ಅಧಿವೇಶನದಲ್ಲಿ ನಡೆಯುತ್ತಿರುವ ಸಂಸತ್ತಿನ ಕಡೆಗೆ ಮೆರವಣಿಗೆಗೆ ತೆರಳಲು ಪೊಲೀಸರು ಅವಕಾಶ ನೀಡದ ಹಿನ್ನೆಲೆ ಜಂತರ್-ಮಂತರ್‌ನಲ್ಲಿ ಪ್ರತಿಭಟನೆನಡೆಸಲು ರೈತರಿಗೆ ಅವಕಾಶ ನೀಡಲಾಗಿದೆ.
ನೂತನವಾಗಿ ಜಾರಿಮಾಡಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ವರ್ಷ ನ. ೨೬ ರಿಂದ ರೈತರು ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಉತ್ಪಾದನೆ, ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ ಕಾಯ್ದೆ ೨೦೨೦) ರೈತ ಸಬಲೀಕರಣ ಮತ್ತು ಸಂರಕ್ಷಣೆ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ, ಕುರಿತಂತೆ ಸರ್ಕಾರ ಮತ್ತು ರೈತರ ನಡುವೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ.