ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ಕಾಯ್ದೆಗಳ ಪ್ರತಿಕೃತಿ ದಹನ

ರಾಯಚೂರು.ಜೂ.೦೫-ಕೃಷಿ ಕಾಯ್ದೆ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ವತಿಯಿಂದ ಲೋಕಸಭೆ ಸದಸ್ಯರ ಕಚೇರಿ ಮುಂದೆ ಮಸೂದೆಗಳ ನಕಲು ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಅವರಿಂದು ನಗರದ ಲೋಕಸಭಾ ಸದಸ್ಯರ ಕಚೇರಿ ಮುಂದೆ ಮಸೂದೆಗಳ ನಕಲು ಪ್ರತಿಗಳನ್ನು ಸುಟ್ಟು ಕೂಡಲೇ ಕಾರ್ಮಿಕ ವಿರೋಧಿ ನೀತಿ ತಕ್ಷಣ ವಾಪಾಸ್ ಪಡೆಯುವಂತೆ ಒತ್ತಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಚಾಮರಸ ಪಾಟೀಲ್ ಅವರು ಮಾತನಾಡುತ್ತಾ ೧೯೭೪ರಲ್ಲಿ ದುಡಿಯುವ ವರ್ಗಕ್ಕೆ ಆತಂಕ ಉಂಟಾಗಿದ್ದು ರಾಜಕೀಯ ವರ್ಗಕ್ಕೆ ತೊಂದರೆಯಾಗಿದ್ದು ಆಡಳಿತ ವಿಫಲವಾಗಿದ್ದು ರಾಜಕೀಯ ಬದಲಾವಣೆ ಮಾಡಲು ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಯನ್ನು ಬಿಹಾರದಲ್ಲಿ ಪ್ರಾರಂಭ ಮಾಡಿದರು.
ಅಲ್ಲಿ ಅನೇಕ ನಾಯಕರು ಜೈಲಿಗೆ ಕಳುಹಿಸಿದರು ಅವಾಗ ನವ ನಿರ್ಮಾಣ ಕ್ರಾಂತಿ ಹುಟ್ಟುಗೊಂಡಿತು ಇಂದು ಸದ್ಯದ ಪರಸ್ಥಿತಿ ಅದೇ ರೀತಿಯಲ್ಲಿ ದೇಶದಲ್ಲಿ ನಿರ್ಮಾಣ ವಾಹಿತು ಇಂದು ರೈತ ವಿರೋಧಿ ಕಾನೂನುಗಳು,ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಕೃಷಿ ಭೂಮಿ, ಮಾರುಕಟ್ಟೆಯನ್ನು ಮತ್ತು ಕಾರ್ಮಿಕರನ್ನು ಸಂಪೂರ್ಣವಾಗಿ ರಾಷ್ಟ್ರೀಯ ಕಂಪನಿಗಳಿಗೆ ತೆಕ್ಕೆಗೆ ಕೊಡಲು ಮೋದಿ ಸರ್ಕಾರ ನೀಡಲು ಮುಂದಾಗಿದ್ದಾರೆ.
ಕಳೆದ ಆರು ತಿಂಗಳಿನಿಂದ ದೆಹಲಿಯಲ್ಲಿ ರೈತರು ಹೋರಾಟ ನಡೆಸಿದ್ದಾರೆ,ದೇಶದಾದ್ಯಂತ ಸರ್ಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಇಂದು ರಾಜ್ಯಾದ್ಯಂತ ಮೋದಿ ಅವರು ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಯ್ದೆಗಳ ನಕಲು ಪ್ರತಿಗಳನ್ನು ಸುಡುವುದರ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಜಿ.ವೀರೇಶ್,ಶರಣಬಸವ,ರವಿ ಕುಮಾರ, ಬಸವರಾಜ,ಮಾರೆಪ್ಪ ಹರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.