ಕೃಷಿ ಕಾಯ್ದೆ ವಾಪಾಸ್ – ರೈತರ ಜಯ


ರಾಯಚೂರು.ನ.೧೯- ಕೇಂದ್ರ ಸರ್ಕಾರದ ರೈತ ವಿರೋಧಿ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಾಪಾಸ್ ರೈತರ ಹೋರಾಟಕ್ಕೆ ದೊರೆತ ಜಯವಾಗಿದೆಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಅವರು ಹೇಳಿದ್ದಾರೆ.
ದೇಶದ ಬೆನ್ನೆಲುಬಾದ ರೈತರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಳೆದ ಒಂದು ವರ್ಷದಿಂದ ನಿರಂತರ ಹೋರಾಟದ ಫಲ ಕೊನೆಗೂ ಕೇಂದ್ರ ಸರ್ಕಾರ ಮಣಿಯುವಂತೆ ಮಾಡಿದೆ. ಈ ಹೋರಾಟದಲ್ಲಿ ೭೦೦ ಜನ ತಮ್ಮ ಜೀವ ಕಳೆದುಕೊಳ್ಳಲು ಯಾರು ಹೊಣೆ?. ಕಾಂಗ್ರೆಸ್ ಪಕ್ಷದ ಒತ್ತಡದಿಂದ ಈ ಕಾಯ್ದೆ ಹಿಂಪಡೆಯಲಾಗಿದೆಂದು ಅವರು ಹೇಳಿದರು.