ಕೃಷಿ ಕಾಯ್ದೆ ರದ್ದತಿಗೆ ಸಿಐಯುಟಿ ಆಗ್ರಹ

ಶಹಾಪುರ:ಜ.9:ರೈತ ವಿರೋಧಿ. ಜನ ವಿರೊಧಿ ನಾಲ್ಕು ಕಾಯ್ದೆಗಳನ್ನು ರದ್ದುಗೊಳಿಸಬೇಕು. ಸಾಮೂಹಿಕ ಸಮೃದ್ದಿಗೆ ಪೂರಕ ಕಾಯ್ದೆಗಳನ್ನು ರೂಪಿಸಿಬೇಕು, ಎಂದು ಆಗ್ರಹಿಸಿ ಶಹಾಪುರ ತಾಲುಕಿನ ಸಿಐಯುಟಿ ಸಂಘಟನೆ ತಹಿಸಲ್ದಾರವರಿಗೆ ಮನವಿ ಸಲ್ಲಿಸುವದರ ಮುಖಾಂತರ ಆಗ್ರಹಿಸಿದೆ. ರೈತರ ಖಾತ್ರಿ ಕಾಯ್ದೆಗಳನ್ನು ಜಾರಿಗೊಳಸಬೆಕು,ಎಂದು ಅವರು ಒತ್ತಾಯಿಸಿದರು. ಈ ಸಂಧರ್ಬದಲ್ಲಿ ವಿಧ್ಯುತ್ ಮಸೂದೆಯನ್ನು ರದ್ದುಗೊಳಸಬೇಕು. ಆಧಾಯ ತೆರಿಗೆ ಮಿತಿಯಿಂದ ಹೊರಗಿರುವ ಕುಟುಂಬಗಳಿಗೆ 7500 ಮಾಸಿಕ ನಗದು ಹಣ ನೀಡಬೇಕು. ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಬೇಕು. ಹಲವಾರು ಬೇಡಿಕೆಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಮಯದಲ್ಲಿ ಜಿಲ್ಲಾ ಮುಕಮಡರಾದ ಜೈಲಾಲ ತಪಟದಮನಿ. ಮಲ್ಲಯ್ಯ ಪೊಲಂಪಲ್ಲಿ. ಬಸವಲಿಂಗಮ್ಮ ನಾಟೆಕಾರ. ಯಮನಮ್ಮ ಕಸನ್, ಸುನಂದಾ ಹೀರೆಮಠ. ಮಂಜುಳಾ ಹೊಸಮನಿ. ಸಿದ್ದು ವಿಬೂತಹಳ್ಳಿ. ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.