ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸುವ ಜೀಪ್ ಜಾಥಾಗೆ ಚಾಲನೆ

ಬಳ್ಳಾರಿ: ನ 19: ಆಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ, ದಲಿತ, ಕಾರ್ಮಿಕ, ಹಾಗು‌ಜನ ವಿರೋದಿ ಮಸೂದೆಗಳನ್ನು‌ಹಿಂಪಟೆಯಬೇಕೆಂದು ಇಂದಿನಿಂದ ನ.22 ರವರೆಗೆ ಜಿಲ್ಲೆಯಾಧ್ಯಾಂತ ಹಮ್ಮಿಕೊಂಡಿರುವ ಜೀಪ್ ಜಾಥಾ ಮತ್ತು ಸಮಾವೇಶಕ್ಕೆ ನಗರದ ಗಾಂಧಿ ಭವನದ ಮುಂಭಾಗದಲ್ಲಿ ಸಮಿತಿ ಸಂಚಾಲಕ ಯು. ಬಸವರಾಜ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಸವರಾಜ್ ಅವರು
ಅಧಿಕಾರಕ್ಕೆಬಂದ ಎಲ್ಲಾ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ರೈತನ್ನು, ರೈತ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೃಷಿ, ವಿದ್ಯುತ್, ಎಪಿಎಂಸಿ ಮತ್ತು ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದು ಅವನ್ನು ಸಂಸತ್ತಿನಲ್ಲಿ ತಮಗಿರುವ ಬಹುಮತವನ್ನು ದುರುಪಯೋಗ ಪಡಿಸಿಕೊಂಡು, ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲು‌ ಮುಂದಾಗಿದೆ.
ದೇಶದ ಜನರ ತೆರಿಗೆ ಹಣದಿಂದ ನೆಡೆಯುವ, ಸರ್ಕಾರಿ ಸ್ವಾಮ್ಯದ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಖಾಸಗಿ ಯವರ ಮಡಿಲಿಗೆ ಹಾಕಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಕಾಯ್ದೆಗಳ ತಿದ್ದುಪಡಿಯಿಂದ ರೈತರನ್ನು ಸಂಕಷ್ಟಕ್ಕೆ ದೂಡಲು ಮುಂದಾಗಿದೆ. ಅದಕ್ಕೆ ಇದನ್ನು ವಿಋಓದಿಸಿ ಮತ್ತು‌ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಜೀಪ್ ಜಾಥಾ ಹಮ್ಮಿಕೊಂಡಿದೆ.
ಜಿಲ್ಲೆಯ ಎಲ್ಲಡೆ ಸಂಚರಿಸಿ ಸಂಡೂರಿನಲ್ಲಿ ಸಮಾಪನಗೊಳ್ಳಲಿದೆಂದು ಹೇಳಿದರು.
ಅಲ್ಲದೆ ಈ‌ಜಾಗೃತಿಯಿಂದ ಈ ತಿಂಗಳ 26 ರಂದು‌ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಎಲ್ಲರ ಬೆಂಬಲ‌ ಕೋರಿದರು.
ಈ ಸಂದರ್ಭದಲ್ಲಿ ಎ ಮಿತಿಯ ಮುಖಂಡರುಗಳಾದ ಜೆ.ಸತ್ಯಬಾಬು, ವಿ.ಎಸ್. ಶಿವಶಂಕರ್, ಸಂಗನಕಲ್ಲು ಕೃಷ್ಣ, ಮಾಧವರೆಡ್ಡಿ, ಗಂಗಾಧಾರವಾಡಕರ್, ಕರಿಯಪ್ಪ ಗುಡಿಮನಿ, ಕಲ್ಕಂಬ ಪಂಪಾಪತಿ, ಈಶ್ವರಪ್ಪ ಮೊದಲಾದವರು ಇದ್ದರು