ಕೃಷಿ ಕಾಯ್ದೆ ತಡೆಗೆ ರೈತರ ಸ್ವಾಗತ: ಸಮಿತಿಗೆ ವಿರೋಧ

ನವದೆಹಲಿ, ಜ. ೧೩- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್ ನಿರ್ಧಾರವನ್ನ ಸ್ವಾಗತಿಸಿರುವ ರೈತ ನಾಯಕರು, ಸಮಿತಿ ರಚನೆಯನ್ನು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಮಿತಿ ಕೃಷಿ ಕಾಯ್ದೆಗಳ ಪರವಾಗಿದೆ .ಹೀಗಾಗಿ ಸಮಿತಿಯೊಂದಿಗೆ ಯಾವುದೇ ಕಾರಣಕ್ಕೂ ಮಾತುಕತೆ ನಡೆಸುವುದಿಲ್ಲ ಎಂದು ರೈತ ನಾಯಕರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ತನಕ ನಮ್ಮ ಹೋರಾಟ ದಿಂದ ಹಿಂದೆ ಸರಿಯುವ ಯಾವುದೇ ಉದ್ದೇಶ ಇಲ್ಲ ಎಂದು ರೈತ ನಾಯಕರು ಸ್ಪಷ್ಟಪಡಿಸಿದ್ದಾರೆ.
ರೈತ ಸಂಘಟನೆಗಳ ಪರ ವಕೀಲರಾದ ದುಶ್ಯಂತ್ ದವೆ, ಎಚ್.ಎಸ್ ಪೂಲ್ಕ, ಕೋಲಿನ್ ಗೋನ್ಸಲೇವ್ ಮತ್ತಿತರರು ರೈತ ನಾಯಕರನ್ನು ಭೇಟಿ ಮಾಡಿ ಮುಂದಿನ ನಡೆಯ ಕುರಿತು ಚರ್ಚೆ ನಡೆಸಿದರು
ಬಳಿಕ ಮಾಹಿತಿ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ, ನವಂಬರ್ ೨೬ ರಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ಹೊರವಲಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಒಂದು ಬಾರಿ ಪ್ರಧಾನಿ ನರೇಂದ್ರ ಮೋದಿಯವರು ನಾಯಕರೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್, ಕೃಷಿ ಕಾಯ್ದೆಗಳ ಅನುಷ್ಠಾನವನ್ನ ತಾತ್ಕಾಲಿಕವಾಗಿ ತಡೆ ಹಿಡಿದಿದೆ .ಆದರೆ ಇದನ್ನು ಶಾಶ್ವತವಾಗಿ ತಡೆಯುವ ಕೆಲಸ ಮಾಡಿಲ್ಲ .ಹೀಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಕೇಂದ್ರ ಸರ್ಕಾರ ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಸುಪ್ರೀಂಕೋರ್ಟ್ ರಚನೆ ಮಾಡಿರುವ ೪ ಸದಸ್ಯರ ಸಮಿತಿ ಮುಂದೆ ಯಾವುದೇ ಕಾರಣಕ್ಕೂ ಮಾತುಕತೆಗೆ ರೈತ ನಾಯಕರು ಭಾಗವಹಿಸುವುದಿಲ್ಲ ಈ ಸಮಿತಿ ಕೃಷಿ ಕಾಯ್ದೆಗಳ ಪರವಾಗಿದೆ ಎಂದು ತಿಳಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್, ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ಕಳೆದ ೫೦ ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ ಬದಲಾಗಿ ಅದಾನಿ, ಅಂಬಾನಿ ಸಂಸ್ಥೆಗಳಿಗೆ ನೀಡಲು ಮುಂದಾಗಿದೆ ಎಂದು ದೂರಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಬಲ್‌ಬೀರ್ ಸಿಂಗ್ ರಾಜವಾಲ್ ಮಾತನಾಡಿ, ಸುಪ್ರೀಂಕೋರ್ಟ್ ರಚನೆ ಮಾಡಿರುವ ಸಮಿತಿ ಕೇಂದ್ರ ಸರ್ಕಾರದ ಪರವಾಗಿದೆ ಹೀಗಾಗಿ ಸಮಿತಿಯ ಮುಂದೆ ಯಾವುದೇ ಕಾರಣಕ್ಕೂ ತಾವು ಮಾಡುವುದಿಲ್ಲ ಮಾಡುವುದಿಲ್ಲ ಎಂದು ಹೇಳಿದೆ.
ಅಖಿಲ ಭಾರತೀಯ ಕಿಸಾನ ಒಕ್ಕೂಟದ ಪ್ರೇಮ್ ಸಿಂಗ್ ಬಂಗು ಮಾತನಾಡಿ, ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿರುವುದು ಸುಪ್ರೀಂಕೋರ್ಟ್ ಅಲ್ಲ ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ಅಲ್ಲಿಯತನಕ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ