ಕೃಷಿ ಕಾಯ್ದೆ ಕೇಂದ್ರಕ್ಕೆ ಸುಪ್ರೀಂ ತಪರಾಕಿ

ನವದೆಹಲಿ, ಜ. ೧೧- ಕೃಷಿ ಕಾಯ್ದೆಗಳನ್ನು ತಡೆಹಿಡಿಯುತ್ತಾರೋ? ಅಥವಾ ಮುಂದೇನು ಮಾಡುವಿರಿ ತಿಳಿಸಿ, ಇದರಲ್ಲಿ ಪ್ರತಿಷ್ಠೆ ಏಕೆ? ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದೆ.
ರೈತರು ಮತ್ತು ಕೇಂದ್ರಸರ್ಕಾರದ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿರುವ ನೂತನ ಕೃಷಿ ಕಾಯ್ದೆಗಳ ಸಂಬಂದ ಕೇಂದ್ರ ಸರ್ಕಾರ ನಡೆಸುತ್ತಿರುವ ಮಾತುಕತೆ ಬಗ್ಗೆ ಸುಪ್ರೀಂಕೋರ್ಟ್ ಇಂದಿಲ್ಲಿ ತೀವ್ರ ಅಸಮಾಧಾನ ವ್ವ್ಯಕ್ತಪಡಿಸಿದ್ದು ಕಾಯ್ದೆಗಳನ್ನು ತಡೆ ಹಿಡಿಯುತ್ತಿರೋ ಅಥವಾ ಮುಂದೇನು ಮಾಡುತ್ತಿರೋ ತಿಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ತಡೆ ನೀಡಿದೆ.

ಕೃಷಿ ಕಾಯ್ದೆಗಳನ್ನು ತಡೆಯಿರಿ ಇಲ್ಲವೆ ಮುಂದೆ ಏನು ಮಾಡುತ್ತೀರಿ ಎನ್ನುವುದನ್ನು ಹೇಳಿ. ಇಲ್ಲದಿದ್ದರೆ ನಾವು (ಸುಪ್ರೀಂಕೋರ್ಟ್) ಏನು ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಎಂದೂ ಖಡಕ್ಕಾಗಿ ಹೇಳಿದೆ.

ಕೃಷಿ ಕಾಯ್ದೆಗಳ ಸಂಬಂದ ಸಮಿತಿ ರಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಕಡಕ್ ಸಂದೇಶ ರವಾನಿಸಿ ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ, ನ್ಯಾಯಮೂರ್ತಿ ಎಸ್. ಎ ಬೋಪಣ್ಣ, ವಿ ರಾಮಸುಬ್ರಣ್ಯಂ ಪೀಠ ತಿಳಿಸಿದೆ.

ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ಅನುಮತಿ ನೀಡುವ ಜೊತೆಗೆ ಅದೇ ಸ್ಥಳದಲ್ಲಿ ಬೇಕಾದರೆ ಪ್ರತಿಭಟನೆ ನಡೆಸಿ ಅಥವಾ ಬೇರೆ ಸ್ಥಳದಲ್ಲಿ ಪ್ರತಿಭಟನೆಯನ್ನು ಮಾಡಲಿ ಎಂದು ಪ್ರತಿಭಟನೆಗೂ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ

ಸುಪ್ರೀಂಕೋರ್ಟ್ ನ ಈ ತೀರ್ಪಿನಿಂದಾಗಿ ನವಂಬರ್ ೨೬ ರಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಂತಾಗಿದೆ.

ಕೃಷಿ ಕಾಯ್ದೆಗಳ ವಿರುದ್ಧ ದಾಖಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ಕೃಷಿ ಕಾಯ್ದೆ ಅನುಷ್ಠಾನಕ್ಕೆ ತಡೆ ನೀಡಿದೆ.

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ಹೊರ ವಲಯದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಪರಿಸ್ಥಿತಿ ಕೆಟ್ಟಿದೆ ಇದಕ್ಕೆ ಪ್ರತಿಯೊಬ್ಬರೂ ಕಾರಣ. ಸದ್ಯದ ಪರಿಸ್ಥಿತಿಗೆ ಪ್ರತಿಯೊಬ್ಬರು ಜವಾಬ್ದಾರಿ ಯಾವುದೇ ಕಾರಣಕ್ಕೂ ರಕ್ತಪಾತ ವಾಗುವುದನ್ನು ಅಥವಾ ನಮ್ಮ ಕೈಗೆ ಗಾಯಗಳಾಗುವುದು ಅನ್ನು ನೋಡಲು ಇಷ್ಟಪಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡ್ ಹೇಳಿದ್ದಾರೆ.

ಇದಕ್ಕೂ ಮುನ್ನ ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್, ರೈತರು ಮತ್ತು ಕೇಂದ್ರ ಸರ್ಕಾರ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿತ್ತು ಆದರೆ ಇದುವರೆಗೂ ಯಾವುದೇ ಪರಿಹಾರ ದೊರಕದ ಹಿನ್ನೆಲೆಯಲ್ಲಿ ನೂತನ ಕೃಷಿ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆಯಾಜ್ನೆ ನೀಡಿದೆ ಇದು ಸಹಜವಾಗಿಯೇ ರೈತರ ಮುಖದಲ್ಲಿ ಹರ್ಷ ಮೂಡಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರು ಈ ಮುಂಚೆ ನ್ಯಾಯಾಲಯ ಸೂಚಿಸಿದಂತೆ ರೈತ ಸಂಘಟನೆಗಳು ಮತ್ತು ರೈತರೊಂದಿಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

೨೩ ರಾಜ್ಯಗಳ ರೈತರಷ್ಟೇ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಇದಕ್ಕೆ ದಕ್ಷಿಣ ಭಾರತದ ರಾಜ್ಯಗಳು ಮತ್ತು ಪಶ್ಚಿಮ ಭಾಗದ ರಾಜ್ಯಗಳಲ್ಲಿ ಬೆಂಬಲವಿಲ್ಲ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎನ್ನುವ ವಿಷಯವನ್ನು ಸುಪ್ರೀಂಕೋರ್ಟ್ ಗಮನಕ್ಕೆ ತಂದರು.

ಕೃಷಿ ಕಾಯ್ದೆಗಳ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರ ರೈತರೊಂದಿಗೆ ಎಂಟು ಸುತ್ತಿನ ಮಾತುಕತೆ ನಡೆಸಿದೆ ಅದರಲ್ಲಿ ಕೆಲ ಬೇಡಿಕೆ ಈಡೇರಿಸಲು ಸಮ್ಮತಿಸಿದೆ ಎಂದು ಹೇಳಿದರು

ಸಮಿತಿ ರಚಿಸಿ

ನೂತನ ಕೃಷಿ ಕಾಯ್ದೆಗಳ ಸಂಬಂಧ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ಈ ಸಂಬಂಧ ಕ್ರಮ ಕೈಗೊಳ್ಳದಿದ್ದರೆ ನಾವೇ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ ಸಮಿತಿಯ ರಚನೆಯನ್ನು ನಾವೇ ಹೇಳಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಕೇಂದ್ರಕ್ಕೆ ಸೂಚನೆ

ನೂತನ ಕೃಷಿ ಕಾಯ್ದೆಯ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್, ಕೃಷಿ ಕಾಯ್ದೆಗಳನ್ನು ನೀವು ( ಕೇಂದ್ರ ಸರ್ಕಾರ) ತಡೆಯಿಡಿಯುತ್ತೀರೋ ಅಥವಾ ಮುಂದೆ ಏನು ಮಾಡುತ್ತೀರಿ ಹೇಳಿ ಇಲ್ಲದಿದ್ದರೆ ನಾವು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ.
-ನ್ಯಾ. ಎಸ್ ಎ ಬೋಬ್ಡ್
ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್

ರೈತರು ಮತ್ತು ಕೇಂದ್ರಸರ್ಕಾರದ ಮುಂದುವರಿಕೆ

ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆಗೆ ಸಲಹೆ

ನೀವಾಗಿಯೇ ತಡೆ ಹಿಡಿಯುತ್ತೀರಾ ಮುಂದೇನು ಮಾಡುತ್ತೀರಿ ತಿಳಿಸಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ರೈತರ ಹೋರಾಟಕ್ಕೆ ಆರಂಭಿಕ ಗೆಲುವು

ಮುಂದಿನ ವಿಚಾರಣೆ ಶುಕ್ರವಾರಕ್ಕೆ ನಿಗದಿ

ರೈತರ ಪ್ರತಿಭಟನೆಗೆ ಸುಪ್ರೀಂ ಕೋರ್ಟ್ ಸಮ್ಮತಿ