ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಪ್ರತಿಭಟನೆ

ದಾವಣಗೆರೆ.ಜೂ.೫ : ಕೃಷಿಕರು ಹಾಗೂ ಕಾರ್ಮಿಕರಿಗೆ ಮಾರಕವಾಗಿರುವ   5 ಕೃಷಿ ಕಾಯಿದೆಗಳನ್ನು  ಕೈಬಿಡುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಹೋರಾಟ ಸಮಿತಿ, ಸಂಯುಕ್ತ ಹೋರಾಟ ಸಮಿತಿ ಶನಿವಾರ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿತು ನಗರದ ಹೊರವಲಯದಲ್ಲಿರುವ ಆವರಗೆರೆ ಗ್ರಾಮದ ಕಾಮ್ರೆಡ್ ಸುರೇಶಪ್ಪ ಶೇಖರಪ್ಪ ಪಂಪಾಪತಿ ಸಮಾಧಿ ಬಳಿ ಕೃಷಿ ಕಾಯಿದೆಗಳ ಪ್ರತಿಗಳನ್ನು ದಹನ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿತ್ತು .ಇದೇ ವೇಳೆ ಮಾತನಾಡಿದ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಆವರಗೆರೆ ಉಮೇಶ್, ಇಂದು ನಾವು ಕೃಷಿ ಕಾಯಿದೆಗಳನ್ನು  ವಿರೋಧಿಸಿ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಾದ ಶಾಸಕರು, ಸಂಸದರು, ಜಿಲ್ಲಾಡಳಿತ   ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಬೇಕಿತ್ತು. ಆದರೆ ಕರೋನದ ಹಿನ್ನೆಲೆಯಲ್ಲಿ ನಾವು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಇದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕರೆಗಂಟೆಯಾಗಿದ್ದು ಈ ಕೂಡಲೇ ಕೃಷಿ ಕಾಯಿದೆಗಳನ್ನು  ಹಿಂಪಡೆಯಬೇಕೆಂದು ಆಗ್ರಹಿಸಿದರು .ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುವ ಮಾತಿನ ಮೇಲೆ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಮೋದಿ ಸರಕಾರ ರಾಷ್ಟ್ತ್ರೀಕೃತ ಕಂಪನಿಗಳನ್ನು ಖಾಸಗೀಕರಣ ಮಾಡಿದ್ದಲ್ಲದೆ ಈ ದೇಶದ ದುಡಿಯುವ ವರ್ಗದ ಬೆನ್ನ ಮೇಲೆ ಖಾರ ಅರೆಯುವ ಕೆಲಸ ಮಾಡಿದೆ . ಅಲ್ಲದೆ ರೈತರು ಮತ್ತು ಕೃಷಿ ಕಾರ್ಮಿಕರನ್ನು ಹಂತ ಹಂತವಾಗಿ ತುಳಿಯುವ ಹುನ್ನಾರ ವನ್ನು ಈ ಕೃಷಿ ಕಾಯಿದೆ ಒಳಗೊಂಡಿವೆ. ಇವು ನಿಜಕ್ಕೂ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.ರೈತ ಮುಖಂಡ ಹೊನ್ನೂರು ಮುನಿಯಪ್ಪ ಮಾತನಾಡಿ ಕೃಷಿ ಕಾಯ್ದೆ, ಬೀಜ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್ ಕಾಯ್ದೆ,  ನೀರು ಕಾಯ್ದೆ ಸೇರಿದಂತೆ ರೈತರಿಗೆ ಕಾರ್ಮಿಕರಿಗೆ ಅನುಕೂಲವಾಗುವ ಎಲ್ಲ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ  ಕೇಂದ್ರ ಸರ್ಕಾರ ಈ ವರ್ಗಕ್ಕೆ ಮೋಸ ಮಾಡುತ್ತಿದೆ ಅಲ್ಲದೆ ಬಂಡವಾಳ ಶಾಹಿಗಳ ಪರವಾಗಿ ಈ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .ಸುಗ್ಗಿ ಯಿಂದ ಮತ್ತೊಂದು ಸುಗ್ಗಿ ಬರುವವರೆಗೂ ರೈತರು ಬೆಳೆದ ಬೆಲೆಗೆ ಒಂದೇ ಬೆಲೆ ಇರುವಂತೆ ಇಲ್ಲವೇ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸತೀಶ್ ಅರವಿಂದ್, ಆವರಗೆರೆ ಚಂದ್ರು, ಪಿ ಕೆ ಲಿಂಗರಾಜ್,  ಐರಣಿ ಚಂದ್ರು,  ಬಾನಪ್ಪ, ಬಿ ದುಗ್ಗಪ್ಪ, ರಂಗನಾಥ್, ತಿಪ್ಪೆಸ್ವಾಮಿ, ಪರಮೇಶ್ವರಪ್ಪ ಇತರರು ಇದ್ದರು.