ಕೃಷಿ ಕಾಯಿದೆ ವಾಪಸ್ ಪಡೆಯುವಂತೆ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ.ಮಾ.೨೭ ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಕಾಯ್ದೆಗಳನ್ನು ಜಾರಿಗೆ ತಂದಿರುವುದರಿಂದ ಅದನ್ನು ವಿರೋಧಿಸಿ ನಾನಾ ಸಂಘಟನೆಗಳು ಶುಕ್ರವಾರ ಬಂದ್ಗ್ ಗೆ ಕರೆ ನೀಡಲಾಯಿತು. ಪಟ್ಟಣದಲ್ಲಿ ಎಂದಿನಂತೆ ಅಂಗಡಿ ಮುಗ್ಗಟ್ಟುಗಳು ವ್ಯಾಪಾರ-ವಹಿವಾಟು ಬಸ್ ಸಂಚಾರ ಸಾರಿಗೆ ಸಹಜವಾಗಿತ್ತು.
ಈಶ್ವರ್ ದೇಗುಲದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ರಾಜ್ಯ ರೈತ ಸಂಘ ಪ್ರಾಂತ ರೈತ ಸಂಘ ಸೇರಿ ನಾನಾ ಸಂಘಟನೆ ಪದಾಧಿಕಾರಿಗಳು ಬಸವೇಶ್ವರ ವೃತ್ತದ ವರೆಗೆ ಮೆರವಣಿಗೆ ನಡೆಸಿದರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಸಂಘದ ತಾಲೂಕು ಅಧ್ಯಕ್ಷ ಸಿದ್ದನಗೌಡ ಮಾತನಾಡಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು ಬಂಡವಾಳಶಾಹಿಗಳ ಪರ ಕೆಲಸ ಮಾಡುವ ಮೋದಿ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಕೃಷಿ ಕಾಯ್ದೆಗಳು ರೈತರ ವಿರೋಧಿಯಾಗಿದ್ದು ಅವುಗಳನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಸಿಪಿಎಂ ತಾಲೂಕು ಕಾರ್ಯದರ್ಶಿ ಜಗನ್ನಾಥ ಜಿಲ್ಲಾ ಸಮಿತಿಯ ಸದಸ್ಯ ಬಸವರಾಜ ದೇವದಾಸಿ ವಿಮೋಚನಾ ಸಂಘದ ಮಾಳಮ್ಮ ಮಾತನಾಡಿದರು. ತಹಸೀಲ್ದಾರ್ ನಮಗೆ ಮನವಿ ಸಲ್ಲಿಸಿದರು. ಮುಖಂಡ ರಾದ ಗೋಣಿಬಸಪ್ಪ ಸರ್ದಾರ್ ಹುಲಿಗೆಮ್ಮ ಕೊಟಿಗಿ ಮಲ್ಲಿಕಾರ್ಜುನ ರಂಗಪ್ಪ ದಾಸರ್ ಸಿದ್ದಾರೆಡ್ಡಿ ಹನುಮಂತಪ್ಪ ಇತರರು ಇದ್ದರು.