ಕೃಷಿ ಇಲಾಖೆ ಯಿಂದ ಬೆನಕನಹಳ್ಳಿಯಲ್ಲಿ ಕ್ಷೇತ್ರತೋತ್ಸವ

ಕೊಟ್ಟೂರು ನ 18 :ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೃಷಿ ಇಲಾಖೆಯಿಂದ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಕ್ಷೇತ್ರೋತ್ಸವ ನಡೆಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷಶಾನ ಬೋಗರ ಗುರುಮೂರ್ತಿ ಮಾತನಾಡಿ ರೈತರು ಸ್ವಹಿತಾಸಕ್ತಿಯನ್ನು ಹೆಚ್ಚಿಸಿಕೊಂಡು ಕೃಷಿಯಲ್ಲಿ ತೋಡಗಿಸಿ ಕೊಳ್ಳಿ ಕೃಷಿ ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿರಿ ಎಂದರು.
ಪ್ರಗತಿಪರ ರೈತ ಸಜ್ಜನ ಮಾತನಾಡಿ ಅರಣ್ಯ ಹಾಗೂ ತೋಟಗಾರಿಕೆ ಬೆಳೆಯನ್ನು ರೈತರು ಹೆಚ್ಚಾಗಿ ಬೆಳೆದಲ್ಲಿ ರೈತರು ಆರ್ಥಿಕವಾಗಿ ಸುಧರಣೆ ಯಾಗಲು ಸಾಧ್ಯವೆಂದರು.
ಕೃಷಿಇಲಾಖೆಯ ಅಧಿಕಾರಿ ಶ್ಯಾಮ ಸುಂದರ, ಶ್ರವಣ ಕುಮಾರ, ಆಶಾ ಬೆಲೂರು, ಹಿರೇಮಠ, ತಿಮ್ಮಣ್ಣ, ಕೊಟ್ರೇಶ, ಶಂಕ್ರಪ್ಪ, ಎಪಿಎಂಸಿ ನಿರ್ದೇಶಕ ಸೋಮಣ್ಣ, ಚಪ್ಪರದಹಳ್ಳಿ ಕೊಟ್ರಪ್ಪ ಸೇರಿದಂತೆ ಇತರರು ಇದ್ದರು.