ಕೃಷಿ ಇಲಾಖೆ ಅಧಿಕಾರಿಗಳಿಂದ ಕ್ಷೇತ್ರ ಭೇಟಿ, ಹಿಂಗಾರು ಬೆಳೆ ಸಮೀಕ್ಷೆ

ಚಿಂಚೋಳಿ,ಜ.6- ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನ ದೇಗಲಮಡಿ ಗ್ರಾಮದ ಪಾಶುಮಿಯಾ ಕೊರಬ ಹಾಗೂ ಬೀರಪ್ಪ/ಘಾಳಪ್ಪ ಇವರ ಜೋಳ ಹಾಗೂ ಕಡಲೆ ಹೊಲಗಳಿಗೆ ಕ್ಷೇತ್ರ ಭೇಟಿ ಕೈಗೊಂಡು ತಾಲೂಕಿನ ಹಿಂಗಾರು ಬೆಳೆ ಸಮೀಕ್ಷೆಯನ್ನು ನಡೆಸಿದರು.
ಕ್ಷೇತ್ರ ಭೇಟಿಯಲ್ಲಿ ಹಿಂಗಾರು ಬೆಳೆಗಳ ಸಂರಕ್ಷಣೆಯ ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿದರು. ಈಗಾಗಲೆ ಹಿಂಗಾರು ಬೆಳೆ ಸರ್ವೆ ಆಪ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದ್ದು, ಪ್ರತೀ ಗ್ರಾಮಕ್ಕೆ ಒಬ್ಬರಂತೆ ಖಾಸಗಿ ಬೆಳೆ ಸಮೀಕ್ಷೆದಾರರನ್ನು ನೇಮಿಸಲಾಗಿದೆ ಹಿಂಗಾರು ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.
ಬೆಳೆ ಸಮೀಕ್ಷೆ ಮಾಡಲು ರೈತರ ಆಧಾರ್ ವಿವರಗಳು ಕಡ್ಡಾಯವಾಗಿ ಅವಶ್ಯಕತೆ ಇದ್ದು ಖಾಸಗಿ ಬೆಳೆ ಸಮೀಕ್ಷೆದಾರರೊಂದಿಗೆ ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಿಸಿ ಹಿಂಗಾರು ಬೆಳೆ ವಿವರಗಳನ್ನು ಅಪೆÇ್ಲೀಡ್ ಮಾಡಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕರಾದ ಅನೀಲ ಕುಮಾರ ರಾಠೋಡ್ ತಿಳಿಸಿದರು.
ಸಕಾಲದಲ್ಲಿ ಬೆಳೆ ವಿವರಗಳನ್ನು ಅಪೆÇ್ಲೀಡ್/ದಾಖಲು ಮಾಡಿಸದಿದ್ದಲ್ಲಿ ಸರಕಾರದಿಂದ ರೈತರಿಗೆ ದೊರೆಯುವ ಅತೀವೃಷ್ಟಿ, ಅನಾವೃಷ್ಟಿ ಹಾಗೂ ಬೆಳೆವಿಮೆ ಪರಿಹಾರ ಬೆಂಬಲ ಬೆಲೆ ಯೋಜನೆ ಪಹಣಿ ಪತ್ರಿಕೆಯಲ್ಲಿ ಬೆಳೆಗಳ ನಮೂದು ಸೇರಿದಂತೆ ಇತರೆ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಾರೆಂದು ಹೇಳಿದರು.
ಈ ಸಂಧರ್ಭದಲ್ಲಿ ಚಿಂಚೋಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ರಾಠೋಡ್. ಚಿಮ್ಮನಚೋಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಭಿಲಾಶ. ಖಾಸಗಿ ಬೆಳೆ ಸಮೀಕ್ಷೆದಾರರಾದ ಮೈನೋದ್ದಿನ್. ರಮೇಶ ದೇಗಲಮಡಿ. ರೈತರಾದ ಸಿದ್ದಪ್ಪ. ಪಾಶುಮಿಯಾ ಕೊರಬ. ಬೀರಪ್ಪ ಸೇರಿದಂತೆ ರೈತರು ಸಮೀಕ್ಷೆಯ ಕಾರ್ಯದಲ್ಲಿ ಭಾಗವಹಿಸಿದ್ದರು.