ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಂದ ಬೆಳೆ ಸಮೀಕ್ಷೆ

ಕೆ.ಆರ್.ಪೇಟೆ. ನ.16:- ತಾಲೂಕಿನ ಶೀಳನೆರೆ ಹೋಬಳಿಯ ಹುಣಸನಹಳ್ಳಿ ಬಳ್ಳೇಕೆರೆ ಗ್ರಾಮದಲ್ಲಿ ಭಾನುವಾರ ಸುರಿದ ಬಾರಿ ಮಳೆಗೆ ನಾಲ್ಕೈದು ಕೆರೆಗಳು ತುಂಬಿ ನೀರು ಹೆಚ್ಚಾಗಿ ಹರಿದ ಕಾರಣ ಸುತ್ತಮುತ್ತಲಿನ ಗ್ರಾಮದ ರೈತರು ಬೆಳೆದ ಭತ್ತ ರಾಗಿ ಸೇರಿದಂತೆ ಹಲವು ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದವು ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಬಿ.ಎಸ್.ಚಂದ್ರಶೇಖರ್ ಅವರು ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸಿ ಮಾತನಾಡಿ ಬಳ್ಳೇಕೆರೆ ಗ್ರಾಮದಲ್ಲಿ ಸುಮಾರು ಮೂವತ್ತು ಎಕರೆಗೂ ಅಧಿಕ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಭತ್ತದ ಬೆಳೆ ಕೊಚ್ಚಿ ಹೋಗಿ ರೈತರಿಗೆ ನಷ್ಟವಾಗಿದೆ ಅದೇ ರೀತಿ ಶೀಳನೆರೆ ಗ್ರಾಮದಲ್ಲಿ ಹತ್ತು ಎಕರೆಯಲ್ಲಿ ರಾಗಿ ಬೆಳೆ ಕೊಚ್ಚಿ ಹೋಗಿದೆ ಇದರಿಂದ ರೈತರಿಗೆ ಲಕ್ಷಾಂತರ ರೂಗಳ ನಷ್ಟವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಪರಿಹಾರವಾಗಿ ಭತ್ತದ ಬೆಳೆಗೆ ಹೆಕ್ಟೇರಿಗೆ 13500 ಹಾಗೂ ರಾಗಿ ಬೆಳೆಗೆ ಹೆಕ್ಟೇರಿಗೆ 6800 ರೂಗಳಂತೆ ನಷ್ಟ ಹೊಂದಿರುವ ರೈತರಿಗೆ ಶೀಘ್ರದಲ್ಲೇ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಎಸ್.ಮಂಜುನಾಥ್, ಕೃಷಿ ಅಧಿಕಾರಿಗಳಾದ ಎಸ್.ಕೆ.ಸತೀಶ್, ಟಿ.ಕೆ.ಶ್ರೀಧರ್ ಸೇರಿದಂತೆ ಹಲವರು ಹಾಜರಿದ್ದರು.