ಕೃಷಿ ಇಲಾಖೆಯಿಂದ ಹಿಂಗಾರು ಬೆಳೆ ಕ್ಷೇತ್ರ ಸಮೀಕ್ಷೆ ಸಭೆ

ಚಿಂಚೋಳಿ,ಜ.9- ಇಲ್ಲಿನ ತಹಸಿಲ್ ಕಾರ್ಯಾಲಯದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕಿನ ಹಿಂಗಾರು ಬೆಳೆಯ ಸಮೀಕ್ಷೆ ಕುರಿತ ಸಭೆಯಲ್ಲಿ ಸಮೀಕ್ಷೆಯ ಮಾಹಿತಿಯನ್ನು ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೃಷಿ ಇಲಾಖೆ ತಾಲೂಕ ಅಧಿಕಾರಿಗಳಾದ ಡಾ. ಅನೀಲ ಕುಮಾರ ರಾಠೊಡ ಅವರು ವಹಿಸಿದ್ದರು, ಸಭೆ ಉದ್ದೇಶಿಸಿ ಮಾತನಾಡಿದ ಡಾ. ರಾಠೊಡ, ತಾಲೂಕನ ಹಿಂಗಾರು ಬೆಳೆ ಕ್ಷೇತ್ರ ಸಮೀಕ್ಷೆಯನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ ಕಾಲಮಿತಿಯೋಳಗೆ ಇದನ್ನು ಪೂರ್ಣಗೊಳಿಸುವಂತೆ ಹೇಳಿದರು.
ಸಭೆಯಲ್ಲಿ. ಕಂದಾಯ ಇಲಾಖೆ ಶಿರಸ್ತೇದಾರ ವೆಂಕಟೇಶ ದುಗ್ಗಲ್. ಚಿಂಚೋಳಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಪ್ರಕಾಶ ರಾಠೊಡ. ಮತ್ತು ತಾಲೂಕಿನ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ಹಾಗೂ ತಾಲೂಕಿನ ಲೆಕ್ಕಪಾಲಕರು(ಗಿಂ) ಸಭೆಯಲ್ಲಿ ಇದ್ದರು.