ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ಧರದಲ್ಲಿ ಬೀಜ ವಿತರಣೆ

ಸಿರುಗುಪ್ಪ ಜೂ 10 : ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ 2021-22ನೇ ಸಾಲಿನ ರೀಯಾತಿ ದರದಲ್ಲಿ ವಿವಿಧ ಬೀಜಗಳನ್ನು ರೈತರಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿತರಿದರು.
ನಂತರ ಮಾತನಾಡಿದ ಅವರು ಮುಂಗಾರಿನಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಸರ್ಕಾರವು ನೀಡುವ ಉತ್ತಮ ತಳಿಯ ಬೀಜಗಳನ್ನು ಪಡೆದುಕೊಂಡು ಒಳ್ಳೆಯ ಇಳುವರಿಯನ್ನು ತೆಗೆಯಬೇಕು, ಕೃಷಿ ಅಧಿಕಾರಿಗಳಿಂದ ನಾಟಿಯ ಕುರಿತು, ಕಳೆ ನಿಯಂತ್ರಣ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಕೃಷಿಯ ಚಟುವಟಿಕೆಯ ಕಾರ್ಯಗಳನ್ನು ನಿರ್ವಹಿಸುವಂತೆ ತಿಳಿಸಿದರು.
ಇದೆ ಸಂದರ್ಭದಲ್ಲಿ ಕೃಷಿ ಸಹಾಯಕ ನಿದೇರ್ಶಕ ನಜೀರ್ ಅಹ್ಮದ್, ಎ.ಪಿ.ಎಂ.ಸಿ ಅಧ್ಯಕ್ಷ ಮಲ್ಲನಗೌಡ, ತೆಕ್ಕಲಕೋಟೆ ಹೋಬಳಿಯ ರೈತ ಸಂರ್ಪಕ ಅಧಿಕಾರಿ ಸೌಮ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ, ಗ್ರಾಮ ಪಂಚಾಯತಿ ಸದಸ್ಯ ಅಡಿವೆಯ್ಯಸ್ವಾಮಿ, ಮುಖಂಡರಾದ ಮಲ್ಲಿಕಾರ್ಜುನಗೌಡ, ಮುದಿಯಪ್ಪ ಇದ್ದರು.