ಕೃಷಿ ಇಲಾಖೆಯಿಂದ ರೈತರಿಗೆ ಮುಂಗಾರು ಬೀಜ ವಿತಸಿದ ಲಕ್ಷ್ಮಣ ಸವದಿ

ಅಥಣಿ : ಜೂ.6:ಸರ್ಕಾರ ರೈತರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದಿದೆ ರೈತರು ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಬೇಕು, ಇದೀಗ ಮುಂಗಾರು ಮಳೆ ಲಕ್ಷಣಗಳು ಕಾಣಲಾರಂಬಿಸಿದ್ದು ಭೂತಾಯಿ ನಂಬಿಕೊಂಡಿರುವ ರೈತರನ್ನು ಆ ತಾಯಿ ಎಂದು ಕೈಬಿಡುವುದಿಲ್ಲ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು,
ಅವರು ಕೃಷಿ ಇಲಾಖೆ ಅಥಣಿ ವತಿಯಿಂದ ಇಂದು ರೈತರಿಗೆ ಸಾಂಕೇತಿಕವಾಗಿ ಬಿತ್ತನೆ ಬೀಜದ ಪ್ಯಾಕೆಟ್ ವಿತರಣೆ ಮಾಡಿ ಮಾತನಾಡಿದರು, ಅವರು ಮುಂದೆ ಮಾತನಾಡುತ್ತಾ ವಾಡಿಕೆಯಂತೆ ಪ್ರತಿ ವರ್ಷ ಜೂನ್ ಏಳರ ಬಳಿಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಗಾರು ಆರಂಭವಾಗುತ್ತದೆ.ಆ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ ಸಮಯದಲ್ಲಿ ಸೋಯಾ, ಉದ್ದು, ಹೆಸರು, ಸೇರಿದಂತೆ ನಮ್ಮ ಭಾಗದ ರೈತರ ವಾಡಿಕೆ ಪ್ರಮಾಣದ ಬೇಡಿಕೆ ಅನುಗುಣವಾಗಿ ಸಂಸ್ಕರಣೆ ಮಾಡಿದ್ದು ಇಂದು ಸಾಂಕೇತಿಕವಾಗಿ ಅಥಣಿ ತೆಲಸಂಗ ಮತ್ತು ಇತರೆ ಹೋಬಳಿ ಮಟ್ಟದ ರೈತರಿಗೆ ಬೇಕಾದ ಬೀಜಗಳನ್ನು ಪಡೆದು ಸದುಪಯೋಗ ಮಾಡಿಕೊಳ್ಳಬೇಕು ಎಂದ ಅವರು
ತಾಲ್ಲೂಕಿನ ರೈತರಿಗೆ ಅಗತ್ಯ ಇರುವಷ್ಟು ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಕೊರತೆ ಕಂಡು ಬರುವ ಮೊದಲೆ ಹೆಚ್ಚಿನ ಪ್ರಮಾಣದಲ್ಲಿ ಬೀಜ ಸಂಗ್ರಹಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಯಾವುದೇ ದುರ್ಬಳಕೆ, ತಾರತಮ್ಯ ಆಗದಂತೆ ವ್ಯವಸ್ಥೆ ಮಾಡಬೇಕು. ಸಂಪರ್ಕ ಕೇಂದ್ರಕ್ಕೆ ಬರುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಹಿಂಗಾರಿಗೆ ಬೇಕಾದ ಬೀಜ ಮತ್ತು ಗೊಬ್ಬರ ದಾಸ್ತಾನಿಗೂ ಆದ್ಯತೆ ಕಡುವ ಮೂಲಕ ಈಗಿನ ಅಧಿಕಾರಿಗಳು ರೈತರ ಜೊತೆಗೆ ಇತ್ತಮ ಬಾಂಧವ್ಯ ಇಟ್ಟಿಕೊಂಡಿರುವದನ್ನು ಗಮನಿಸಿದ್ದೇವೆ
ರೈತರಿಗೆ ಕಷ್ಟಗಳು ಬಂದಾಗ ಅವುಗಳನ್ನು ನಿವಾರಣೆ ಮಾಡುವ, ಬೆಳೆ ಹಾನಿಯಾದಾಗ ಪರಿಹಾರ ಕೊಡಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ ಅನ್ನುವ ಭರವಸೆ ಇದೆ.ತಾಲೂಕಿನ ರೈತರ ಪರವಾಗಿ ಅವರಿಗೆ ಅಭಿನಂದನೆಗಳು. ಆ ಭಗವಂತನಲ್ಲಿ ಮಳೆ ಮತ್ತು ಬೆಳೆ ಚೆನ್ನಾಗಿ ಬರಲೆಂದು ಪ್ರಾರ್ಥಿಸುತ್ತೇನೆ ಎಂದರು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ನಿಂಗಣ್ಣ ಬಿರಾದಾರ, ರವಿಕುಮಾರ ಬಂಗಾರಿ, ಉಮೇಶ ಹಾವರೆಡ್ಡಿ, ಶಿವಪುತ್ರ ಗುಂಜಿಗಾಂವಿ, ವೆಂಕಪ್ಪ ಉಪ್ಪಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು,

ಮಳೆಗಾಲದಲ್ಲಿ ರೈತರಿಗೆ ಅನುಕೂಲವಾಗುವಂತಹ ಸಲಹೆಗಳನ್ನು ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರಬೇಕು. ದೇಶದ ಬೆನ್ನೆಲುಬಾಗಿರುವ ರೈತ ಕುಲಕ್ಕೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೆ??? ಸರ್ಕಾರ ಬದ್ಧವಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕು, ಆ ಭಗವಂತನು ರೈತರಿಗೆ ಮಳೆ ಬೆಳೆ ಉತ್ತಮವಾಗಿ ನೀಡಲಿ ಈ ಮುಂಗಾರು ಹರ್ಷದಾಯಕವಾಗಲಿ, ಎಂದು ಪ್ರಾರ್ಥಿಸೋಣ,

                  ಲಕ್ಷ್ಮಣ ಸವದಿ, 

ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕರು