ಕೃಷಿ ಇಲಾಖೆಯಿಂದ ಉಚಿತ ಬೀಜ ವಿತರಣೆಗೆ ಒತ್ತಾಯ

ಸಿರವಾರ.ಜೂ.೭- ಗ್ರಾಮಾಂತರ – ಹಳ್ಳಿಗಾಡಿಗೂ ಕೊವೀಡ್ ವೈರಸ್ ಹೆಚ್ಚಾಗಿರುವ ಕಾರಣ ನರೇಗಾ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ಕೂಲಿ ಕಾರ್ಮಿಕರಿಗೆ ನಿರುದ್ಯೊಗ ಭತ್ಯ, ಸಣ್ಣ ಅತೀ ಸಣ್ಣ, ಪ.ಜಾ ಮತ್ತು ಪ.ಪಂಗಡದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡುವಂತೆ ಒತ್ತಾಯಿಸಿ ಕವಿತಾಳ ತಾ.ಪಂ ಮಾಜಿ ಸದಸ್ಯೆ ಹಾಗೂ ಕೆ.ಪಿ.ಸಿ.ಸಿ ಕಾರ್ಯದರ್ಶಿ ಮಂಜುಳಾ ಅಮರೇಶ ಮುಖ್ಯಮಂತ್ರಿಗಳಾದ ಬಿಎಸ್.ಯಡ್ಡಿಯೂರನವರಿಗೆ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್ ರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಕೊವೀಡ್ ೧೯ ವೈರಸ್ ಎರಡನೇ ಅಲೆ ಗ್ರಾಮಾಂತರ ಪ್ರದೇಶದಲ್ಲಿಯೆ ಅದಿಕವಾಗಿದ್ದೆ. ನಗರ ಪ್ರದೇಶದ ಜನರು ಗ್ರಾಮೀಣ ಪ್ರದೇಶಕೆ ಆಗಮಿಸಿದ್ದಾರೆ. ಈಗಾಗಲೇ ಅನೇಕ ಕಡೆ ಗ್ರಾ.ಪಂ ನಿಂದ ಉದ್ಯೋಗ ಖಾತ್ರಿಯೋಜನೆಯಲ್ಲಿ ಚೀಟಿ ಪಡೆದು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಬ್ಬರಲ್ಲಿ ಕೊವೀಡ್ ಸೊಂಕು ಕಾಣಿಸಿಕೊಂಡರೂ ಎಲ್ಲಾ ಕಾರ್ಮಿಕರು ಕೆಲಸ ಕಳೆದು ಕೊಳಬೇಕಾಗುತ್ತದೆ.
ಇದರಿಂದ ಎಲ್ಲಾರಿಗೂ ತೊಂದರೆ ನರೇಗ ಚೀಟಿ ಪಡೆದವರಿಗೆ ಉದ್ಯೋಗ ಭತ್ಯ ನೀಡಿದರೆ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಮುಂಗಾರು ಪ್ರಾರಂಭವಾಗಿದ್ದೂ ರೈತರು ಬೀಜ ಖರಿದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ತೊಂದರೆಯಾಗಿದೆ. ಸಣ್ಣ,ಅತೀ ಸಣ್ಣ, ಪ.ಜಾತಿ ಹಾಗೂ ಪ.ಪಂಗಡದ ರೈತರಿಗೆ ಉಚಿತವಾಗಿ ಬೀತ್ತನೆ ಬೀಜ ನೀಡುವ ಮೂಲಕ ನೇರವಾಗಬೇಕು ಎಂದು ಮುಖ್ಯಮಂತ್ರಿಗಳಿಗೆ ಹಾಗೂ ಕೃಷಿ ಸಚಿವರಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.