ಕೃಷಿ ಆಯುಕ್ತರಿಂದ ರೈತರೊಂದಿಗೆ ಸಂವಾದ ಕಾರ್ಯಕ್ರಮ

ದಾವಣಗೆರೆ. ಆ.4; ಬೆಂಗಳೂರಿನ ಕೃಷಿ ಆಯುಕ್ತರಾದ ಬಿ.ಶರತ್  ರೈತ ಸಂಪರ್ಕ ಕೇಂದ್ರ ಆನಗೋಡಿಗೆ ಭೇಟಿ ನೀಡಿದ ಸಂದರ್ಭ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಪ್ರಗತಿ ಪರ ರೈತರಾದ ಹಾಲವರ್ತಿ ಗ್ರಾಮದ ಧನಂಜಯ್ ರವರಿಂದ ಗಿಡ ನೆಡಿಸುವ ಮೂಲಕ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕೃಷಿ ಇಲಾಖೆಯಿಂದ ಅನುಷ್ಠಾನವಾಗುತ್ತಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ರೈತರೊಂದಿಗೆ ಚರ್ಚೆ ಮಾಡುತ್ತಾ ಪ್ರಸ್ತುತ ಕೃಷಿ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಬದಲಾವಣೆ ಮತ್ತು ನಿರೀಕ್ಷೆಗಳ ಬಗ್ಗೆ ನೇರವಾಗಿ ರೈತರಿಂದ ಅಭಿಪ್ರಾಯ ಪಡೆದರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇತರರು ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು ಆದರೆ ಸಾವಯವ ಬಗ್ಗೆ ಇನ್ನು ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲು ಕೇಳಿಕೊಂಡರು. ಹಾಲವರ್ತಿ ಗ್ರಾಮದ ರೈತ ಮಹಿಳೆ ಇಂದ್ರಮ್ಮ ನವರು ಗೊಬ್ಬರ ಬೆಲೆ ಹೆಚ್ಚಾಗುತ್ತಿದ್ದು ಅದನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಹಾಗೂ ಕಮಲಮ್ಮ ಇವರು ನನಗೆ ಇಲಾಖೆಯವರು ಬೆಳೆ ವಿಮೆ ಬಗ್ಗೆ ಪ್ರಚಾರ ಮಾಡಿದ್ದರೂ ನನಗೆ ಮಾಹಿತಿ ಸಿಕ್ಕಿಲ್ಲ ಬೆಳೆ ವಿಮೆ ಅವಧಿ ವಿಸ್ತರಣೆ ಮಾಡುವಂತೆ ಮನವಿ ಮಾಡಿದರು. ಕೃಷಿ ಆಯುಕ್ತರು ಇದರ ಬಗ್ಗೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ ಅದರಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ನಂತರ ಸಭೆಯಲ್ಲಿ ಹಾಜರಿದ್ದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಿದರು.ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷರಾದಸಿದ್ದೇಶ್  ಮಾತನಾಡಿ ಇಲಾಖೆ ವತಿಯಿಂದ ರಾಜ್ಯಮಟ್ಟದ ಅಧಿಕಾರಿಗಳನ್ನು ಗ್ರಾಮಮಟ್ಟಕ್ಕೆ ಕರೆಸಿ ರೈತರೊಂದಿಗೆ ಈ ರೀತಿಯ ಸಂವಾದ ನಡೆಸುವುದು ಉತ್ತಮ ಕಾರ್ಯ ಇಂತಹ ಕಾರ್ಯಗಳನ್ನು ನಿಯಮಿತ ಕಾಲದಲ್ಲಿ ಹಮ್ಮಿಕೊಂಡಲ್ಲಿ ಸರ್ಕಾರದ ಕಾರ್ಯಕ್ರಮಗಳು ನಿಗಧಿತ ಕಾಲದಲ್ಲಿ ಅನುಷ್ಠಾನವಾಗಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಸಭೆಯಲ್ಲಿ ಹಾಜರಿದ್ದ ಜಂಟಿ ಕೃಷಿ ನಿರ್ದೇಶಕರಾದ ಶ್ರೀನಿವಾಸ್ ಚಿಂತಾಲ್  ಸಭೆಗೆ ಹಾಜರಾಗಿ ಯಶಸ್ವಿಗೊಳಿಸಿದ ರೈತರಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಕೃಷಿ ಆಯುಕ್ತರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕರಾದ ಆರ್.ತಿಪ್ಪೇಸ್ವಾಮಿ. ಸಹಾಯಕ ಕೃಷಿ ನಿರ್ದೇಶಕರುಗಳಾದ ರೇವಣಸಿದ್ದನಗೌಡ ಹೆಚ್.ಕೆ. ಶಿವಕುಮಾರ್. ಕೃಷಿ ಅಧಿಕಾರಿ ಶ್ರೀನಿವಾಸ್. ಹಾಜರಿದ್ದರು

Attachments area