ಕೃಷಿ ಅರ್ಥವ್ಯವಸ್ಥೆಯಲ್ಲಿ ಇ-ನಾಮ್ ಒಂದು ಪ್ರಗತಿಪರ ಹೆಜ್ಜೆಯಾಗಿದೆ

ಉಜಿರೆ, ಜೂ.೩- ಎಲೆಕ್ಟ್ರಾನಿಕ್‌ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್). ಪಾರದರ್ಶಕತೆ ಮತ್ತು ಶೋಷಣೆರಹಿತ ವ್ಯವಸ್ಥೆಯ ಪ್ರಗತಿಪರ ಹೆಜ್ಜೆಯಾಗಿದ್ದು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಂದ ರೈತರಿಗೆ ಆಗುವ ಅನ್ಯಾಯತಡೆಗಟ್ಟುವಲ್ಲಿಇದು ಸಹಕಾರಿಯಾಗಿದೆಎಂದು ಹೈದರಾಬಾದಿನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆಯ ಮಹಾನಿರ್ದೇಶಕಡಾ.ಚಂದ್ರಶೇಖರ, ಪಿ. ಹೇಳಿದರು.

ಅವರು ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ  ಆಯೋಜಿಸಿದ  ರಾಷ್ಟ್ರಮಟ್ಟದ “ಆನ್‌ಲೈನ್ ಮಾರ್ಕೆಟಿಂಗ್‌ಕಡೆಗೆ ಭಾರತದ ಕೃಷಿ ಮಾರುಕಟ್ಟೆ ವ್ಯವಸ್ಥೆ” ಎಂಬ ವೆಬಿನಾರ್ ಉದ್ಘಾಟಿಸಿ ಮಾತನಾಡಿದರು.

ರೈತರು ಕೃಷಿ ಉತ್ಪನ್ನಗಳನ್ನು ವಿದ್ಯುನ್ಮಾನ ವೇದಿಕೆಯ ಮೂಲಕ ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಬೆಲೆ ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಶುಭಾಶಂಸನೆ ಮಾಡಿದ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಆನ್‌ಲೈನ್ ವ್ಯವಹಾರದಿಂದರೈತರು ಮತ್ತುಗ್ರಾಹಕರಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.

ಹೈದರಾಬಾದ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿರ್ದೇಶಕ ಡಾ. ಕೆ.ಸಿ. ಗುಮ್ಗೋಲ್ ಮಠ್ ಮತ್ತು ಕೃಷಿ ವ್ಯವಹಾರ ತಜ್ಞ ಡಾ.ಸತ್ಯೇಂದ್ರಕುಮಾರ್ ಕೃಷಿ ಮಾರುಕಟ್ಟೆ ಸುಧಾರಣೆಗಳು ಮತ್ತು ವಿದ್ಯುನ್ಮಾನ ವೇದಿಕೆಯ ಸವಾಲುಗಳ ಬಗ್ಯೆ ಮಾಹಿತಿ ನೀಡಿದರು.

ಎಸ್.ಡಿ.ಎಂ. ಕಾಲೇಜಿನ  ಪ್ರಾಂಶುಪಾಲ ಡಾ.ಎಸ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ. ಜಯಕುಮಾರ ಶೆಟ್ಟಿ ಸ್ವಾಗತಿಸಿದರು. ಡಾ. ಮಹೇಶ ಶೆಟ್ಟಿ ಧನ್ಯವಾದವಿತ್ತರು.ಡಾ. ಗಣರಾಜ್ ಕಾರ್ಯಕ್ರಮ ನಿರ್ವಹಿಸಿದರು. ೨೦೦ ಮಂದಿ ಪ್ರತಿನಿಧಿಗಳು ವೆಬಿನಾರ್‌ನಲ್ಲಿ ಭಾಗವಹಿಸಿದರು.