ಕೃಷಿಯೇ ಪ್ರತಿಯೊಂದಕ್ಕೂ ಮೂಲ

ಕಲಬುರಗಿ: ನ.17:ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಮೌಲ್ಯವರ್ಧಿತ ತರಬೇತಿ ಕೋರ್ಸ್‍ನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ರೈತ ತರಬೇತಿ ಕೇಂದ್ರ ಕೋಟನೂರ (ಡಿ) ಕಲಬುರಗಿಯ ಸಹಾಯಕ ನಿರ್ದೇಶಕ ರಾದ ಶ್ರೀ ಅನೀಲಕುಮಾರ ಅವರು ಕೃಷಿಯು ಪ್ರತಿಯೊಂದು ಜೀವ ವಿಜ್ಞಾನದ ಮೂಲ ಎಂದು ಹೇಳಿದರು
ಮುಂದುವರೆದು ಮಾತನಾಡಿದ ಅವರು ಇಂತಹ ಕೊರ್ಸಗಳನ್ನು ಆಯೋಜಿಸಿ ವಿದ್ಯಾರ್ಥಿನಿಯರು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಬೇರೆ ವಿಷಯಗಳ ಬಗ್ಗೆ ಮಾಹಿತಿ ಒದಗಿಸುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯಾಅತಿಥಿಗಳಾದ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಹಾಗೂ ಉಪನ್ಯಾಕಿಯಾದ ಶ್ರಿಮತಿ.ಮರ್ಸಿ ಮೇಡಂ ಅವರು ನಮಗೆ ಇಂತಹ ಅವಕಾಶಗಳು ವಿದ್ಯಾರ್ಥಿ ಜೀವನದಲ್ಲಿ ಇರಲಿಲ್ಲ ನೀವುಗಳು ನಿಜಕ್ಕೂ ಅದೃಷ್ಟವಂತರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿಕೊಂಡಿದ್ದರು ವೇದಿಕೆಯಲ್ಲಿ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಕಲಾ ಪಾಟೀಲ ,ಉಪನ್ಯಾಸಕರಾದ ಕುಮಾರಿ,ಅರ್ಪೀತಾ ಕೊಪ್ಪಳಕರ್,ಕುಮಾರಿ ವಾಸವಿ ಜೋಷಿ ಉಪಸ್ಥಿತರಿದ್ದರು ಡಾ.ಮಹೇಶ ಗಂವ್ಹಾರ ,ಉಪನ್ಯಾಸ ಕರಾದ ಮಿಸ್ ಸ್ಮೀತಾ ಪಾಟೀಲ,ಮಿಸ್.ಪಲ್ಲವಿ,ಮಿಸ್ ಸುರಕ್ಚಾ ಠಾಕೂರ್ ಭಾಗವಹಿಸಿದ್ದರು.ಕುಮಾರಿ.ಪಲ್ಲವಿ ಪ್ರಾರ್ಥಿಸಿದರು,ಕುಮಾರಿ.ವಿದ್ಯಾಶ್ರೀ,ಕುಮಾರಿ.ಉಜ್ಮಾ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು,ಕುಮಾರಿ ಶ್ರೇಯಾ ಹಾಗೂ ಸಿಮ್ರಾನ್ ಕಾರ್ಯಕ್ರಮ ನಿರೂಪಿಸಿದರು ಕುಮಾರಿ .ಅರ್ಷಿಯಾ ವಂದಿಸಿದರು
ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ್ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.