
ಬೀದರ್: ಜು.28:ರೈತರು ಆಧುನಿಕ ಹೈನುಗಾರಿಕೆ ಮಾಡಿ ಅಧಿಕ ಲಾಭಗಳಿಸಬಹುದೆಂದು ಜಿಲ್ಲಾ ಪಶು ವೈಧ್ಯಕೀಯ ನಿರ್ದೇಶಕ ಡಾ. ರವೀಂದ್ರ ಭೂರೆ ಹೇಳಿದರು.
ಮಂಗಳವಾರ ನಗರದ ಪಶುಪಾಲನಾ ಮತ್ತು ಪಶು ವೈಧ್ಯಕೀಯ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಜಾನುವಾರಿ ಮಿಷನ್ ಯೋಜನೆಯಡಿ ಆಜಾದಿಕಾ ಅಮೃತ ಮಹೋತ್ಸವ ದ ಅಂಗವಾಗಿ ಸ್ಥಳಿಯ ಇಲಾಖೆ ಹಾಗು ರಿಲಯನ್ಸ್ ಫೌಂಡೇಷನ್ ಬೀದರ್ ಇವರುಗಳ ಸಹಯೋಗದಲ್ಲಿ ರೈತರಿಗೆ ಆಧುನಿಕ ಪಶುಪಾಲನಾ ಚಟುವಟಿಕೆಗಳ ಬಗ್ಗೆ ಜರುಗಿದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಜ್ಯೋತಿ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರೈತರುಗಳು ಕೃಷಿಯೊಂದಿಗೆ ಕೃಷಿಯೇತರ ಚಟುವಟಿಕೆಗಳನ್ನು ಮಾಡುವುದರಿಂದ ಸಂಸಾರದಲ್ಲಿ ಅತಿ ಹೆಚ್ಚು ಲಾಭಪಡೆಯಲು ಸಹಕಾರಿಯಾಗುತ್ತದೆ. ಜಾನುವಾರುಗಳೋಂದಿಗೆ ಆಡು, ಕುರಿ, ಕೋಳಿಗಳನ್ನು ಸಾಕಾಣಿಕೆ ಮಾಡಿದರೇ ಇನ್ನು ಹೆಚ್ಚಿನ ರೀತಿಯಿಂದ ಹಣ ಸಂಪಾದಿಸಿ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬಹುದೆಂದರು.
ಹೈನು ರಾಸುಗಳ ಆಯ್ಕೆ, ಕಡಿಮೆ ಬಂಡವಾಳದ ಮೂಲಕ ಪಶು ಆಹಾರ ತಯ್ಯಾರಿಕೆ ಐಡಿಯಾಗಳು, ಹೈನು ಜಾನುವಾರುಗಳ ಆರೋಗ್ಯ ಕಾಳಜಿ, ಮಾರುಕಟ್ಟೆ, ರಾಸುಗಳ ನಿರ್ವಹಣೆ ಸೇರಿದಂತೆ ಹತ್ತು ಹಲವಾರು ಮಾಹಿತಿಗಳನ್ನು ಡಾ. ಯೋಗೇಂದ್ರ ಕುಲಕರ್ಣಿ, ಡಾ. ದೇವಾನಂದ ತಗಾಲೆ, ಡಾ. ವಿಕ್ರಂ ಚಾಕೋತೆ ನೀಡಿದರು.
ನಂತರ ರೈತರಿಗೆ ಕಾರಂಜಾ ಜಲಾಶಯದ ಕಟ್ಟಿತೂಗಾಂವ್ ಹತ್ತಿರದ ದೇವಣಿ ಜಾನುವಾರು ಸಂಶೋಧನೆ ಹಾಗು ಮಾಹಿತಿ ಕೇಂದ್ರದಲ್ಲಿ ಡಾ. ವಿಜಯಕುಮಾರ್ ಕುಲಕರ್ಣಿ ಹಾಗು ಡಾ ಪ್ರಕಾಶ ಕುಮಾರ್ ರಾಠೋಡ್ ಅವರ ತಂಡದಿಂದ ಸುಧಾರಿತ ಮೇವಿನ ಬೆಳೆಗಳು, ಬಹು ವಾರ್ಷಿಕ ಹೈಬ್ರೀಡ್ ನೇಪಿಯರ್, ಗಿನಿ ಹುಲ್ಲು, ರೋಡ್ಸ್ ಹುಲ್ಲು, ಕುದುರೆ ಮೆಂತೆ, ದಶರಥ ಹುಲ್ಲು, ಸ್ಟೈಲೋ, ಚೊಗಚೆ, ಸುಪರ್ ನೇಪಿಯರ್, ಹೈನುಗಾರಿಕೆ ಘಟಕ, ಬಂಧನ ಮುಕ್ತ ಕೊಟ್ಟಿಗೆ, ದೇವಣಿ ತಳಿಗಳು, ಸೇರಿದಂತೆ ಮೇವಿನ ಸ್ದಬಳಕೆ ಹಾಗು ಮೇವಿನ 30 ವಿಧಗಳ ಬೀಜಗಳ ಬಗ್ಗೆ ಪ್ರಾತೇಕ್ಷಿಕವಾಗಿ ತಿಳಿಸಲಾಯಿತು.
ತರಬೇತಿಯಲ್ಲಿ ಔರಾದ್ ತಾಲೂಕಿನ ನಾರಾಯಣಪುರ, ದುಡುಕುನಾಳ್, ಭಾಲ್ಕಿ ಭಾತಂಬ್ರಾ, ನಿಡೇಬನ್, ಬಸವಕಲ್ಯಾನದ ದೇವನಾಳ, ಮುಚಳಂಬಾ, ಸೇರಿದಂತೆ 130ಕ್ಕೂ ಹೆಚ್ಚು ರೈತರು ಆಗಮಿಸಿ ತರಬೇತಿಯ ಸದುಪಯೋಗ ಪಡೆದರು. ಎಲ್ಲ ರೈತರಿಗೆ ತರಬೇತಿ ಪ್ರಮಾಣ ಪತ್ರ ನೀಡಲಾಯಿತು.
ಡಾ. ಯೋಗೇಂದ್ರ ಕುಲಕರ್ಣಿ, ಡಾ. ಗೌತಂ ಅರಳಿ, ಡಾ. ಓಂಕಾರ್ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್, ಶಿವಾನಂದ ಮಠಪತಿ, ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳೆ , ಮಲ್ಲಿಕಾರ್ಜುನ, ಅರ್ಜುನ ಮಾಸಿಮಾಡೆ, ಮಲ್ಲಪ್ಪ ಗೌಡಾ, ಗುರುಪ್ರಸಾದ್ ಮೆಂಟೆ, ಪ್ರೇಮಸಾಗರ್ ಇತರರಿದ್ದರು.