ಕೃಷಿಯನ್ನು ನಿರ್ಲಕ್ಷಿಸಿದರೆ ರಾಷ್ಟ್ರದ ಅಭಿವೃದ್ಧಿ ಅಸಾಧ್ಯ

ಕಲಬುರಗಿ,ಅ.29: ಕೃಷಿ ದೇಶದ ಬೆನ್ನೆಲಬು. ಜಗತ್ತಿಗೆ ಆಹಾರವನ್ನು ನೀಡಿ ಬದುಕಿಸುವ ಅನ್ನದಾತನೇ ಸರ್ವಶ್ರೇಷ್ಟ. ಯಾವುದೇ ಸರ್ಕಾರ ಕೃಷಿಯನ್ನು ನಿರ್ಲಕ್ಷಿಸಿ ಅಭಿವೃದ್ಧಿ ಮಾಡಲು ಹೊರಟರೆ, ಅದು ಎಂದಿಗೂ ಕೂಡಾ ನೆರವೇರುವುದಿಲ್ಲ. ಯುವಕರು ಕೃಷಿಯತ್ತ ಚಿತ್ತ ಹರಿಸಿ. ರೈತನ ಬದುಕು ಹಸನಾದರೆ ಮಾತ್ರ ದೇಶ ಸಮೃದ್ಧಿಯಿಂದರಲು ಸಾಧ್ಯವಿದೆಯೆಂದು ರಾಜ್ಯೋತ್ಸವ ಪ್ರಶಸ್ತಿ ಪುರಷ್ಕøತ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ ದಂಗಾಪುರ ಅಭಿಮತ ವ್ಯಕ್ತಪಡಿಸಿದರು.
ಅವರು ನಗರದ ಶಾಂತಿ ನಗರದಲ್ಲಿರುವ ತಮ್ಮ ಸ್ವಗ್ರಹದ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಕೆಎಚ್‍ಬಿ ಗ್ರೀನ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’, ‘ಆಳಂದ ತಾಲೂಕಾ ಗೆಳೆಯರ ಬಳಗ’ ಮತ್ತು ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ಸಂಯುಕ್ತವಾಗಿ ಗುರುವಾರ ತಮಗೆ ಹಮ್ಮಿಕೊಂಡಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ ಸತ್ಕಾರವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ನನಗೆ ಈ ಪ್ರಶಸ್ತಿ ದೊರೆತಿರುವುದು ರೈತರ ಮತ್ತಷ್ಟು ಸೇವೆ ಮಾಡುವ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಕಳೆದ ಅನೇಕ ವರ್ಷಗಳಿಂದ ಕೃಷಿ, ರೈತರ ಕಲ್ಯಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿರುವುದು ಸರ್ಕಾರ ಗುರ್ತಿಸಿ ಪ್ರಶಸ್ತಿ ನೀಡಿರುವುದು ತುಂಬಾ ಸಂತಸ ತಂದಿದ್ದು, ಇದು ಸಮಸ್ಥ ನನ್ನ ರೈತ ವರ್ಗಕ್ಕೆ ಗೌರವಪೂರ್ವಕವಾಗಿ ಸಮರ್ಪಿಸುತ್ತೇನೆ. ನನ್ನ ರೈತಪರ ಜೀವನದ ಕೊನೆಯವರೆಗೂ ಮುಂದುವರೆಸುತ್ತೇನೆ. ಪ್ರಶಸ್ತಿಯ ಒಟ್ಟು 1 ಲಕ್ಷ ರೂ.ಮೊತ್ತದಲ್ಲಿ 50 ಸಾವಿರ ರೂ.ಗಳನ್ನು ನನ್ನ ಗ್ರಾಮವಾದ ದಂಗಾಪುರನಲ್ಲಿ ನಿರ್ಮಿಸಲಾಗುತ್ತಿರುವ ಶರಣಬಸವೇಶ್ವರರ ದೇವಸ್ಥಾನದ ಕಟ್ಟಡಕ್ಕೆ, ಉಳಿದ 50 ಸಾವಿರ ರೂ.ಗಳನ್ನು ಮುಖ್ಯಮಂತ್ರಿ ತುರ್ತು ಪರಿಹಾರ ನಿಧಿಗೆ ನೀಡುತ್ತೇನೆ. ಇದಲ್ಲದೆ 50 ಸಾವಿರ ರೂ.ನನ್ನ ಸ್ವಂತ ಹಣವನ್ನು ಸಮಾಜಮುಖಿಯಾಗಿ ಸೇವೆ ಸಲ್ಲಸಿಸುತ್ತಿರುವ ಜಿಲ್ಲೆಯ ವಿವಿಧ ಮಠ-ಮಾನ್ಯಗಳು, ಮಸೀದಿಗಳು, ಸಂಸ್ಥೆಗಳಿಗೆ ನೀಡುತ್ತೇನೆಂದು ಇದೇ ಸಂದರ್ಭದಲ್ಲಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಸಂಜೀವಕುಮಾರ ಶೆಟ್ಟಿ, ಸುನೀಲಕುಮಾರ ವಂಟಿ, ಸಂಗಮೇಶ್ವರ ಸರಡಗಿ, ದೇವೇಂದ್ರಪ್ಪ ಗಣಮುಖಿ, ಸೋಮಶೇಖರ ಬಿ.ಮೂಲಗೆ, ವಿಶ್ವನಾಥ ಶೇಗಜಿ ದಂಗಾಪುರ, ಅಣ್ಣಾರಾಯ ಮಂಗಾಣೆ, ಬಸವರಾಜ ಹೆಳವರ ಯಾಳಗಿ, ಎಸ್.ಎಸ್.ಪಾಟೀಲ ಬಡದಾಳ, ಬಸವರಾಜ ಪಾಟೀಲ ರೇವೂರ, ಶರಣಬಸಪ್ಪ ಡಿ.ಕುಂಬಾರ, ಪರಮೇಶ್ವರ ಹಿಪ್ಪರಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.