ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಾಣದ ಗುದ್ದಲಿ ಪೂಜೆ

 

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೬;  ತಾಲ್ಲೂಕು ಆನಗೋಡು ಹೋಬಳಿ ಆನಗೋಡು ಗ್ರಾಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ  ಅವರು 2023-24ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣದ ಗುದ್ದಲಿ ಪೂಜೆಯನ್ನು ಫಲಾನುಭವಿ ರೈತರಾದ  ವಿಶ್ವವಿಜೇತ ಇವರ ಜಮೀನಿನಲ್ಲಿ ನೆರವೇರಿಸಿದರು.  ಸರ್ಕಾರವು ಬರದ ಹಿನ್ನೆಲೆಯಲ್ಲಿ ನೀರು ಮತ್ತು ಬೆಳೆ  ಸಂರಕ್ಷಣೆ ಮಾಡಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ಕೃಷಿ ಹೊಂಡಗಳಿಗೆ ಪಾಲಿಥೀನ್ ಹೊದಿಕೆ ಮತ್ತು ತಂತಿ ಬೇಲಿ, ತುಂತುರು ನೀರಾವರಿ ಘಟಕ ಹಾಗೂ ಡೀಸೆಲ್ ಪಂಪ್ ಸೆಟ್ ಗಳನ್ನು  ಸಹಾಯಧನದಡಿಯಲ್ಲಿ ಅಳವಡಿಸಿಕೊಳ‍್ಳಲು ಅವಕಾಶವಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕಾಗಿ ತಿಳಿಸಿದರು.ಕಾರ್ಯ‍ಕ್ರಮದಲ್ಲಿ ಆನಗೋಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಚಂದ್ರಮ್ಮ ಕೋಂ ಹನುಮಂತಪ್ಪ, ಪಂಚಾಯಿತಿ ಸದಸ್ಯರಾದ  ಬಸವರಾಜಪ್ಪ,  ಕರಿಬಸಪ್ಪ,  ಕಲ್ಲೇಶ್,  ಸುರೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.