ಕೃಷಿಕ ಮಗನ ಸಾಧನೆಗೆ ಸಲಾಂ

ಔರಾದ :ನ.10:ಸಾಧನೆಗೆ ಬಡತನ ಅಡ್ಡಿಯಲ್ಲ, ಆತ್ಮವಿಶ್ವಾಸವೊಂದಿದ್ದರೆ ಸಾಕು ಎಂತಹ ಕಾರ್ಯವನ್ನು ಸಾಧಿಸಬಹುದು ಎನ್ನುವುದಕ್ಕೆ ಔರಾದ್ ತಾಲೂಕಿನ ಇಟಗ್ಯಾಳ ಗ್ರಾಮದ ಅನೂಪಕುಮಾರ ತಂದೆ ವೆಂಕಟರಾವ ರಕ್ಷಾಳೆ ಯವರೆ ಸಾಕ್ಷಿ.

ವೆಂಕಟರಾವ ಕೃಷಿಕರಾಗಿ ಮಗನಿಗೆ ಒಳ್ಳೆ ವಿದ್ಯಾಭ್ಯಾಸ ನೀಡಿ ಇಂದು ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆಯಾಗಿದ್ದು ತುಂಬು ಸಂತೊಷದ ಸಂಗತಿ ಎಂದು ನಿವೃತ್ತ ಮುಖ್ಯಗುರು ಸಿದ್ರಾಮ ನಿಡೋದೆ ಹೇಳಿದರು ಅನೂಪಕುಮಾರ ನನ್ನ ವಿದ್ಯಾರ್ಥಿಯಾಗಿದ್ದು ಮೊದಲಿನಿಂದಲೆ ಕ್ರೀಯಾಶಿಲ ವಿದ್ಯಾರ್ಥಿಯಾಗಿದ್ದು ಅವನ ಸಾಧನೆಗೆ ಒಂದು ಸಲಾಂ ಎಂದಯ ಹೇಳಿದರು.

ಕಾಯಕಯೋಗಿ ಟ್ರಸ್ಟ್ ಕಾರ್ಯದರ್ಶಿ ಅನೀಲ ಜಿರೋಬೆ ಮಾತನಾಡಿ ನಮ್ಮ ತಾಲೂಕಿನಲ್ಲಿ ಪ್ರತಿಭೆಗಳಿಗೆ ಕಡಿಮೆ, ಅವರನ್ನು ಹುರುಪು ನೀಡುವ ಕೆಲಸ ಆಗಬೇಕು, ಎಲ್ಲ ಕ್ಷೇತ್ರಗಳಲ್ಲಿ ನಮ್ಮ ತಾಲೂಕಿನ ಸಾಧಕರು ಇರುವುದು ಕಂಡರೆ ಖುಷಿಯಾಗುತ್ತದೆ ಎಂದರು. ಅನೂಪಕುಮಾರ ಸಾಧನೆಗೆ ಇಟಗ್ಯಾಳ ಗ್ರಾಮ ಸೇರಿದಂತೆ ಔರಾದ ತಾಲೂಕಿನಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ಹೇಳಿದರು. ರೈತನ ಮಗನ ಸಾಧನೆಗೆ ಕಾಯಕಯೋಗಿ ಟ್ರಸ್ಟ್ ಸತ್ಕರಿಸಿ ಸನ್ಮಾನಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾರುತಿರಾವ ರಕ್ಷಾಳೆ, ಶಿವಕುಮಾರ ಪಾಟೀಲ್, ಬಾಬುರಾವ ಕಲಾಲ್, ಸಚಿನ್ ಪಾಟೀಲ್, ಅಭಿಲಾಷ ರಕ್ಷಾಳೆ, ರಾಮಗೊಂಡ ಸೇರಿದಂತೆ ಇನ್ನಿತರರಿದ್ದರು.