ಕೃಷಿಕರ ಬೆನ್ನ ಮೇಲೆ ಬಾರಿಸುವ ಕೆಲಸ ನಡೆದಿದೆ; ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ, ನ.3; ಭಾರತ ಕೃಷಿ ಪ್ರಧಾನವಾದ ನಾಡು ಎಂದು ಹೇಳುತ್ತಲೇ ಕೃಷಿಕರ ಬೆನ್ನ ಮೇಲೆ ಬಾರಿಸುವ ಕೆಲಸ ನಡೆದಿದೆ. ಈಗ ಕೃಷಿಕರು ಜಾಗೃತಗೊಂಡು ತಾವು ಬೆಳೆದ ಬೆಳೆಗೆ ತಾವೇ ಬೆಲೆಯನ್ನು ನಿರ್ಣಯಿಸಿ ಮಾರುವಂತಾಗಬೇಕು ಎಂದು ಸಾಣೇಹಳ್ಳಿಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಇಲ್ಲಿನ ಎಸ್ ಎಸ್ ಒಳಾಂಗಣ ರಂಗಮಂದಿರದಲ್ಲಿ ರಾಷ್ಟಿçÃಯ ನಾಟಕೋತ್ಸವ ನಿಮಿತ್ತ ಚಿತ್ರದುರ್ಗ ಜಿಲ್ಲಾ ಕೃಷಿ ಇಲಾಖೆಯು ಆಯೋಜಿಸಿದ್ದ `ಸಿರಿದಾನ್ಯಗಳ ಸಿರಿ’ ವಿಚಾರಸಂಕಿರಣದ ಸಾನ್ನಿಧ್ಯವಹಿಸಿದ್ದ  ಮಾತನಾಡಿ ನಮಗೆ ಪರಿಚತರಿರುವ ನಿಟ್ಟೂರಿನ ಸರೋಜಮ್ಮ ತಾವೇ ಕೃಷಿ ಉತ್ಪಾದನೆಗಳಿಂದ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಿ ಯಶಸ್ವಿಯಾಗಿದ್ದಾರೆ. ಇದು ಇತರರಿಗೆ ಪ್ರೇರಣೆಯಾದರೆ ಕರ್ನಾಟಕದಲ್ಲಿಯೇ ಬಹುದೊಡ್ಡ ಕ್ರಾಂತಿಯಾಗುವುದು. ನಮ್ಮ ಮೌಲ್ಯಗಳನ್ನು ನಾವೇ ಕಟ್ಟಿಕೊಳ್ಳಬೇಕೇ ಹೊರತು; ಇನ್ನೊಬ್ಬರಲ್ಲ. ನಾವು ಬೆಳೆಯುವ ಪದಾರ್ಥಗಳಿಂದ ವಿವಿಧ ಉತ್ಪಾದನೆಗಳನ್ನು ತಯಾರಿಸಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂದಿನ ರೈತ ಯುವಕ-ಯುವತಿಯರು ಹೆಚ್ಚಿನ ಆಸಕ್ತಿವಹಿಸಬೇಕು. ಇದಕ್ಕೆ ಪೂರಕವಾಗಿ ಇಂದು ಸಿರಿದಾನ್ಯಗಳನ್ನೇ ಬಳಸಿ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಶ್ರೀಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವುಗಳನ್ನು ಸೇವಿಸುವುದರ ಮೂಲಕ ಸ್ವತಃ ಎಲ್ಲರು ಅವುಗಳ ಮಹತ್ವ, ರುಚಿ, ಶಕ್ತಿಗಳನ್ನು ಅರಿಯಬಹುದಾಗಿದೆ. ಪ್ರಸಾದದ ನಂತರ ಸರಿಯಾಗಿ 2.30ಕ್ಕೆ ಕಾಯಕದ ಮಹತ್ವವನ್ನು ಸಾರುವ `ನುಲಿಯ ಚಂದಯ್ಯ’ ಎನ್ನುವ ನಾಟಕವನ್ನು ಇಲ್ಲಿನ ವಿದ್ಯಾರ್ಥಿಗಳು ಪ್ರದರ್ಶಿಸುವರು. ಆ ನಾಟಕ ನೋಡಿದ ಮೇಲೆ ಬೆಳೆ, ಬೆಲೆ, ಮಾರುಕಟ್ಟೆ ಮುಂತಾದವುಗಳ ಬಗ್ಗೆ ಸಂವಾದ ಇರುವುದು ಎಂದರು. ಸಿರಿದಾನ್ಯವನ್ನು ರೈತ ಮಹಿಳೆಯ ಮಡಿಲಿಗೆ ಹಾಕುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯಾದುದು ವಿಶೇಷವಾಗಿತ್ತು. ಸಿರಿದಾನ್ಯಗಳ ಸಿರಿ ಉತ್ಪಾದನಾ ಕೈಪಿಡಿಯನ್ನು ಅನಾವರಣ ಗೊಳಿಸಲಾಯಿತು. ಜಿಲ್ಲೆಯ ಏಳುನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. 

Attachments area