
ರಾಯಚೂರು,ಏ.೨೪- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನಲ್ಲಿ ಶ್ರೀ ಜಗಜೋತಿ ಬಸವೇಶ್ವರರ ೮೯೦ನೇ ಜಯಂತೋತ್ಸವನ್ನು ಆಚರಿಸಲಾಯಿತು.
ಶಿಕ್ಷಣ ನಿರ್ದೇಶಕರು, ಇತರೆ ಅಧಿಕಾರಿಗಳು ಶ್ರೀ ಜಗಜೋತಿ ಬಸವೇಶ್ವರವರ ಭಾವಚಿತ್ರಕ್ಕೆ ಪೊಜೆ ಮತ್ತು ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೈಷ್ಣವಿ, ಸ್ನಾತಕೋತ್ತರ ವಿದ್ಯಾರ್ಥಿನಿ ಕೃ.ಮ.ವಿ, ರಾಯಚೂರುರವರು ಪ್ರಾರ್ಥನೆ ಗೀತೆಯನ್ನು ಹಾಡಿದರು. ಮೊದಲಿಗೆ ಡಾ.ಎಸ್.ಬಿ. ಗೌಡಪ್ಪ ಡೀನ್ (ವಿ ಕ್ಷೇ) ಕೃ.ವಿ.ವಿ, ರಾಯಚೂರುರವರು “ಶ್ರೀ ಜಗಜೋತಿ ಬಸವೇಶ್ವರರ ಬಗ್ಗೆ ಪ್ರಸ್ತಾವಿಕ ನುಡಿಗಳನ್ನು ಹಾಗೂ ಡಾ. ವಿಜಂii ಕುಮಾರ ಪಲ್ಲೇದ್, ಪ್ರಾಧ್ಯಾಪಕರು. ಕೃ.ತಾಂ.ಮ.ರಾಯಚೂರುರವರು ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶ್ರೀಮತಿ ಸರ್ವಮಂಗಳ ಸಕ್ರಿ, ಕನ್ನಡ ಉಪನ್ಯಾಸಕರು, ಲಕ್ಷ್ಮೀ ವೆಂಕಟೇಶ್ವರ ಮಹಾವಿದ್ಯಾಲಯ, ರಾಯಚೂರು. ಇವರು ಭಾಗವಹಿಸಿದರು ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ, “ಶ್ರೀ ಜಗಜೋತಿ ಬಸವೇಶ್ವರರ ತಮ್ಮ ವಚನಗಳ ಮೂಲಕ ಜನ ಸಮಾನರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮದ ಬಗ್ಗೆ ಕೃಷಿ ಭೂಮಿ, ಹೆಣ್ಣಿನ ಸಮಾನತೆ, ಮಾನವತೆಯ ಬಗ್ಗೆ, ಅರ್ಥಶಾಸ್ತ್ರದ ಹಾಗೂ ಇತ್ಯಾದಿ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ನಂತರ ಶಿಕ್ಷಣ ನಿರ್ದೇಶಕರಾದ ಡಾ. ಎಂ.ಜಿ. ಪಾಟೀಲ್ ರವರು ಅದ್ಯಕ್ಷೀಯ ಬಾಷಣದಲ್ಲಿ ಶ್ರೀ ಜಗಜೋತಿ ಬಸವಣ್ಣರವರು ಸಮಾಜಕ್ಕೆ ಕೂಡುಗೆಗಳ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಗುರುರಾಜ ಸುಂಕದ, ಡೀನ್, (ಸ್ನಾತ ಕೋತ್ತರ) ಕೃ.ವಿ.ವಿ., ಡಾ.ಎಂ.ನೇಮಿಚಂದ್ರಪ್ಪ, ಡೀನ್ (ಕೃಷಿ.ತಾಂ) ಕೃ.ತಾ.ಮವಿ, , ಡಾ. ಜಾಗೃತಿ.ಬಿ. ದೇಶಮಾನ್ಯ, ಆಡಳಿತಾಧಿಕಾರಿಗಳು, ಕೃ.ವಿ.ವಿ., ಡಾ, ಮಚ್ಚೇಂದ್ರನಾಥ್, ಗ್ರಂಥಪಾಲಕರು.ಕೃ.ವಿ.ವಿ, ಡಾ. ಜಗಜೀವನರಾಮ್, ಪರೀಕ್ಷೆ ಸಂಯೋಜಕರು ಘಟಕ. ಕೃ.ವಿ.ವಿ, ಶಿಕ್ಷಕ, ಶಿಕ್ಷಕೇತರ, ಕಾರ್ಮಿಕ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಡಾ.ಎಸ್.ಬಿ. ಗೌಡಪ್ಪ ಡೀನ್ (ವಿ ಕ್ಷೇ) ಕೃ.ವಿ.ವಿ, ಆಯೋಜಿಸಿದರು, ಡಾ.ಎಂ ಮಹಾದೇವ ಸ್ವಾಮಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಕೃ.ಮ.ವಿ,. ರಾಯಚೂರು ಸ್ವಾಗತಿಸಿದರು. ಡಾ.ಬಸವಣ್ಣಪ್ಪ, ಪ್ರಾದ್ಯಾಪಕರು ಮತ್ತು ಮುಖ್ಯಸ್ಥರು, ಸಾವಯವ ಸಂಸ್ಥೆ ಕೃ.ವಿ.ವಿ, ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮವನ್ನು ಡಾ. ರಾಜಣ, ಉಪ-ನಿರ್ದೇಶಕರು, (ವಿ.ಕ್ಷೇ) ಕೃ.ವಿ.ವಿ. ಇವರು ನಿರೂಪಿಸಿದರು.