ಕೃವಿವಿ ಮಹಿಳೆ ಸಾವಿನ ಪ್ರಕರಣ: ಸಿಬಿಐಗೆ ವಹಿಸಲು ಆಗ್ರಹ


ಧಾರವಾಡ,ಎ.23: ಕೃಷಿ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರಾದ ಉಭಯ ಮಹಿಳೆಯರು ಸಾವಿಗೀಡಾಗಿದ್ದ ಇದರಲ್ಲಿ ಅನೇಕ ಪ್ರಭಾವಿತರು ಶಾಮೀಲಾಗಿರುವದರಿಂದ ಪ್ರಕರಣವನ್ನು ತಿರುಚುವ ಸಾಧ್ಯತೆ ಇದ್ದು ಕೂಡಲೇ ಈ ಪ್ರಕರಣವನ್ನು ಸಿ.ಬಿ.ಐಗೆ
ವಹಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರರಾದ ರಾಬರ್ಟ್ ದದ್ದಾಪುರಿ ಹಾಗೂ
ಪ್ರಧಾನ ಕಾರ್ಯದರ್ಶಿ ಆನಂದ ಜಾಧವ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತರ ಪಾಲಕರು ಪೆÇಲೀಸ್ ಠಾಣೆಯಲ್ಲಿ ಆತ್ಯಾಚಾರ ಹಾಗೂ ಕೊಲೆ ಪ್ರಕರಣವೆಂದು ದಾಖಲಾಗಿರುವುದರಿಂದ
ಈ ಕೂಡಲೆ ಕೃಷಿ ಸಚಿವರನ್ನು ಸಂಪುಟದಿಂದ ಮುಖ್ಯಮಂತ್ರಿಗಳು ವಜಾ ಮಾಡಬೇಕು ಹಾಗೂ ಪ್ರಕರಣ ಸಿಬಿಐ ಗೆ ವಹಿಸಬೇಕೆಂದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೇವೆಯನ್ನು ಮಾಡುತ್ತಿದ್ದ ಕುಮಾರಿ ಮೇಘನಾ ಸಿಂಗನಾಥ , ರೇಖಾ ಕೊಕಟನೂರ ಹಾಗೂ ಎಂ.ಎ. ಮುಲ್ಲಾ ಮತ್ತು ಯು.ಬಿ. ಮೇಸ್ತ್ರಿ ಅವರುಗಳು ಪ್ರಯಾಣಿಸುತ್ತಿದ್ದ ಕಾರು ಉತ್ತರಕನ್ನಡ ಜಿಲ್ಲೆಯ ಮಾಸ್ತಿಕಟ್ಟ ಎಂಬ ಸ್ಥಳದಲ್ಲಿ ದಿನಾಂಕ 31-01-2021 ರಂದು ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಡಿಕ್ಕಿ ಹೊಡೆದು ಅಪಘಾತವು ಸಂಭವಿಸಿದ್ದು ಇತ್ತು . ಅದರಲ್ಲಿಯ ಕೃಷಿ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರಾದ ಉಭಯ ಮಹಿಳೆಯರು ಸಾವಿಗೀಡಾಗಿದ್ದು ಇದ್ದು ಈ ಕುರಿತು ಅಂಕೋಲಾ ಪೆÇಲೀಸ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ಎಂದರು.
ಪ್ರಪ್ರಥಮವಾಗಿ ಈ ಅಪಘಾತವನ್ನು ಸಂಚು ಮತ್ತು ಸಂಶಯಗಳಿಂದ ಕೂಡಿದ್ದಾಗಿದೆ ಎಂದು ಕಾಂಗ್ರೆಸ್ ಪಕ್ಷವು ಅಪಾಧಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ತನಿಖೆಗೆ ಆಗ್ರಹಿಸಿತ್ತು . ತದನಂತರ ಕೆಲವು ಸಂಘಟನೆಗಳು ಈ ಪ್ರಕರಣದ ತನಿಖೆಗಾಗಿ ಒತ್ತಾಯಿಸಿದ್ದು ಉಂಟು . ಆದರೆ ಈ ಪ್ರಕರಣವನ್ನು ಪ್ರಪ್ರಥಮ ಬಾರಿ ತನಿಖೆಗೆ ಒಳಪಡಿಸಲು ಆಗ್ರಹಿಸಿದ್ದೆವೆ ಎಂದರು.
ಪ್ರಸಕ್ತ ಈ ಪ್ರಕರಣ ಕುರಿತು ಮೃತರ ಪಾಲಕರು ಪೆÇಲೀಸ ಠಾಣೆಯಲ್ಲಿ ಆತ್ಯಾ ಚಾರ ಹಾಗೂ ಕೊಲೆ ಪ್ರಕರಣವೆಂದು ದಾಖಲಾಗಿರುವುದು ಅವಶ್ಯವು ಕೂಡಾ ಆಗಿತ್ತು ಎಂಬುದನ್ನು ಇಲ್ಲಿ ಒತ್ತಿ ಹೇಳುತ್ತೇವೆ. ಗುತ್ತಿಗೆ ಆಧಾರದ ಮಹಿಳೆಯರನ್ನು ಕಚೇರಿ ಕೆಲಸಕ್ಕಾಗಿ ಬಾಗಲಕೋಟ ಕರೆದುಕೊಂಡು ಹೋಗುವುದಾಗಿ ಅವರಿಗೆ ತಿಳಿಸಲಾಗಿತ್ತು . ಆದರೆ ಅವರೊಟ್ಟಿಗೆ ಕಾರಿನಲ್ಲಿದ್ದ ಸದರಿ ಉಭಯ ಪುರುಷರು ಅವರನ್ನು ಒತ್ತಾಯ ಪೂರ್ವಕವಾಗಿ ಗೋವಾಕ್ಕೆ ಕರೆದುಕೊಂಡು ಹೋಗಿದ್ದರು ಎಂಬುದು ಈ ಹಿಂದಿನಿಂದಲೂ ನಾವು ಆಪಾಧಿಸಿದ್ದು ಇದೆ ಆದು ಪ್ರಸಕ್ತ ಅವರ ಪಾಲಕರ ದೂರಿನಿಂದ ದೃಢಪಟ್ಟಿರುತ್ತದೆ . ಈ ಹಿಂದೆ ಕೃಷಿ ಸಚಿವರಾದ ಬಿ.ಸಿ. ಪಾಟೀಲ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಕಾರ್ಯಕ್ರಮಗೊಸ್ಕರ ಬಂದಾಗ ಈ ಅಪಘಾತ ಪ್ರಕರಣವನ್ನು ಕುರಿತು ಅವರ ಗಮನಕ್ಕೆ ತೆಗೆದುಕೊಂಡು ಬಂದಾಗ ಅವರು ಸಂಪೂರ್ಣವಾಗಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ಪರವಾಗಿಯೇ ಮಾತನಾಡಿರುವುದು ಖಂಡನೀಯ ಎಂದರು.
ಈ ಪ್ರಕರಣದಲ್ಲಿ ಪ್ರಕ್ಷಪಾತ ತನಿಖೆಯನ್ನು ಕೈಗೊಳ್ಳಬೇಕಾಗಿದ್ದ ಸಂಬಂಧಿತ ಕೃಷಿ ಸಚಿವರೇ ಪಕ್ಷಪಾತ ಮಾಡಿರುವುದು ಮೇಲನೋಟಕ್ಕೆ ಕಂಡು ಬರುತ್ತದೆ. ಈ ಪ್ರಕರಣದಲ್ಲಿ ಪ್ರಥಮ ಆರೋಪಿಯನ್ನಾಗಿ ಕೃಷಿ ವಿಶ್ವವಿದ್ಯಾಲಯದ ಪ್ರಸಕ್ತ ಕಾರ್ಯ ನಿರ್ವಹಿಸುತ್ತಿರುವ ಕುಲಪತಿಗಳನ್ನು ಮಾಡಬೇಕು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇವೆ ಎಂದರು.
ಈ ಪ್ರಕರಣದಲ್ಲಿ ಅನೇಕ ಪ್ರಭಾವಿಗಳ ಕುಮ್ಮಕ್ಕು , ಕೈವಾಡ ಹಾಗೂ ಸಂಚು ಇರುವುದನ್ನು ನಾವು ಪುನರುಚ್ಚರಿಸುತ್ತೇವೆ . ಮೃತರ ಮಾಲಕರಿಂದ ಆತ್ಯಾಚಾರ ಹಾಗೂ ಕೊಲೆ ಪ್ರಕರಣವು ಪೆÇಲೀಸ್ ರಾಣೆಯಲ್ಲಿ ದಾಖಲಾಗಿದ್ದು ಇದೆ . ಆದರ ಪ್ರಭಾವಿಗಳು ಈ ಪ್ರಕರಣವನ್ನು ತಿರುಚುವ , ಮುಚ್ಚಿ ಹಾಕುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಈ ಕೂಡಲೇ ಈ ಪ್ರಕರಣವನ್ನು ಮುಖ್ಯ ಮಂತ್ರಿಗಳು ಸಿಬಿಐ ಗೆ ವಹಿಸಬೇಕೆಂದರು.