ಕೃವಿಗೆ ಬಾಬೂಜಿ ಹೆಸರಿಡಲು ಆಗ್ರಹ

ಧಾರವಾಡ,ಏ6:ಹಸಿರು ಕ್ರಾಂತಿ ಹರಿಕಾರರಾದ ಡಾ|| ಬಾಬು ಜಗಜೀವನರಾಂ ರವರ ಪುತ್ಥಳಿಯನ್ನು ಸ್ಥಾಪಿಸಿ ಮತ್ತು ಅವರ ಹೆಸರನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕೆಂದು ಆಗ್ರಹಿಸಿ ಶ್ರೀ ಭಾರತ ರತ್ನ ಡಾ|| ಬಾಬಾಸಾಹೇಬ ಅಂಬೇಡ್ಕರ ಲಿಡಕರ ಹಿತಾಭಿವೃದ್ಧಿ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಹಸಿರು ಕ್ರಾಂತಿ ಹರಿಕಾರರಾದ ಮಾಜಿ ಉಪ ಪ್ರಧಾನ ಮಂತ್ರಿಗಳಾದ ದಿ|| ಡಾ|| ಬಾಬು ಜಗಜೀವನರಾಂ ರವರ 114ನೇಯ ಜಯಂತಿಯ ಅಂಗವಾಗಿ ದಿ|| ಡಾ|| ಬಾಬು ಜಗಜೀವನರಾಂ ರವರ ಪುತ್ತಳಿ ಸ್ಥಾಪಿಸಿ ಮತ್ತು ಅವರ ಹೆಸರನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲು ಹಲವಾರು ಬಾರಿ ನಮ್ಮ ಲಿಡಕರ ಸಂಘದ ವತಿಯಿಂದ ಮನವಿ ಮಾಡಿಕೊಂಡಿದ್ದು ಇರುತ್ತದೆ. ಆದರೂ ಇಲ್ಲಿಯ ವರೆಗೂ ಧಾರವಾಡದ ಕೃಷಿ ವಿಶ್ವ ವಿದ್ಯಾಲಯಕ್ಕೆ ದಿ|| ಡಾ|| ಬಾಬು ಜಗಜೀವನರಾಂ ರವರ ಪುತ್ತಳಿ ಹಾಗೂ ಅವರ ಹೆಸರನ್ನು ನಮೂದಿಸಿರುವುದಿಲ್ಲ ಎಂದು ಆರೋಪಿಸಿದರು. 
ದಿ|| ಡಾ|| ಬಾಬು ಜಗಜೀವನರಾಂ ರವರು ನಮ್ಮ ಭಾರತ ದೇಶದ ಪರಿಶಿಷ್ಟ ಜಾತಿಯಲ್ಲಿ ಹುಟ್ಟಿ ಅವರು ಶಾಲಾ ಕಾಲೇಜಿನಲ್ಲಿ ಕಲಿಯುವ ಸಮಯದಲ್ಲಿ ತುಂಬಾ ಹಿಂಸೆ ಅನುಭವಿಸಿ ಜಾತಿ ನಿಂದÀನೆಗಳನ್ನು ಮೆಟ್ಟಿ ನಿಂತು, ವಿದ್ಯಾಭ್ಯಾಸ ಮುಗಿಸಿ ಹಲವಾರು ಪ್ರಗತಿಪರ ರೈತಪರ ಹೋರಾಟ ಮಾಡಿ ರಾಜಕೀಯಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದ ದಿಮಂತ ನಾಯಕರಾದ ದಿ|| ಡಾ|| ಬಾಬು ಜಗಜೀವನರಾಂ ರವರ ಪುತ್ತಳಿಯನ್ನು ಧಾರವಾಡದ ಕೃಷಿ ವಿಶ್ವ ವಿದ್ಯಾಲಯಕ್ಕೆ ಅವರ ಹೆಸರನ್ನು ನಮೂದಿಸಿ ಆದೇಶಿಸಬೇಕೆಂದು ಮುಂದಿನ ಏಪ್ರೀಲ್ 5ರ ಒಳಗಾಗಿ ಈ ಮೇಲಿನ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಶೋಕ ಭಂಡಾರಿ ತಿಳಿಸಿದರು. 
  ಪ್ರತಿಭಟನೆಯಲ್ಲಿ ಲಿಡಕರ ಸಂಘದ ಸದಸ್ಯರು,ಸ್ಥಳೀಯ ಹೋರಾಟಗಾರರು, ಮತ್ತು ಪ್ರಗತಿಪರ ಸಂಘಟನೆಗಳು, ಹಾಗೂ ಅಲ್ಪಸಂಖ್ಯಾತರು, ಬುದ್ಧಿಜೀವಿಗಳು, ಚಿಂತಕರು, ಪರಿಶಿಷ್ಟ ಜಾತಿಯ ಎಲ್ಲ ಸಮುದಾಯದ ಬಾಂಧವರು ಮತ್ತು ಅಶೋಕ ಭಂಡಾರಿ,ಲಕ್ಷ್ಮಣ ಬಕ್ಕಾಯಿ,ರಮೇಶ ದೊಡವಾಡ,ಶಿವಪುತ್ರ ಬಿ ಚಿಕ್ಕಪ್ಪ,ವೆಂಕನಗೌಡ ಪಾಟೀಲ, ಮಹಾದೇವ ಕಾಂಬಳೆ, ಕಾಂತ ಮಂಗೋಡಿ, ಲಿಂಬಣ್ಣ ಹಿರೇಮನಿ, ರಾಮಚಂದ್ರ ಸವದತ್ತಿ, ಇತರೆ ಸಮಾಜದ ಬಾಂದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.