ಕೃತಿ ಲೋಕಾರ್ಪಣೆ

ಮುನವಳ್ಳಿ,ಡಿ24: ಪಟ್ಟಣದ ಬಿ.ಈಡಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರÀ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಸಂಪಾದಕತ್ವದ ಬೆಳಕಿನಡೆಗೆ ಕೃತಿ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಸಾನಿಧ್ಯವಹಿಸಿ ಆಶಿರ್ವಚನದಲ್ಲಿ ಮುಕ್ತಾನಂದ ಶ್ರೀಗಳು ಶಿಕ್ಷಣ ನಿಂತ ನೀರಲ್ಲ ಗುರು ತರಗತಿ ಕೋಣೆಗೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳ ಬದುಕಿನ ಪುಟದಲ್ಲಿ ಹೆಜ್ಜೆ ಹೆಜ್ಜೆಗೂ ಅವರಿಗೆ ಜ್ಞಾನದ ಮಾರ್ಗವನ್ನು ತೋರಿಸಬಲ್ಲ. ಇಂಥ ಗುರು ತಾನು ಬೆಳೆಯುವದರೊಂದಿಗೆ ಇತರರಿಗೂ ಜ್ಞಾನ ಉಣ ಬಡಿಸಿ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳ ಮನದಾಳದಲ್ಲಿ ಉಳಿಯಬಲ್ಲ ಎಂಬುದಕ್ಕೆ ಸರ್ವಿ ಗುರುಗಳು ಸಾಕ್ಷಿ. ಬೆಳಕಿನೆಡೆಗೆ ಎಂಬ ಕೃತಿ ಜ್ಞಾನದ ಬೆಳಕನ್ನು ನೀಡುವ ಗುರುಸ್ಮರಣೆ ಕುರಿತುದಾಗಿದೆ. ಸರ್ವಿ ಗುರುಗಳು ಶಿಕ್ಷಣದ ಕೊರತೆ ಇದ್ದ ಸಂದರ್ಭದಲ್ಲಿ ಮುನವಳ್ಳಿಯಲ್ಲಿ ಜೇವೂರ ಗುರುಗಳ ಜೊತೆಗೂಡಿ ಶೈಕ್ಷಣಿಕ ಕ್ರಾಂತಿ ಮಾಡಿದರು. ಇಂದು ಜನತಾ ಗುರುಕುಲ ಸಂಸ್ಥೆ ಅಂದು ಪ್ರೌಢಶಾಲೆಯ ಮೂಲಕ ಪ್ರಾರಂಭವಾಗಿ ಇಂದಿನ ಪದಾಧಿಕಾರಿಗಳ ಮೂಲಕ ಎಲ್.ಕೆ.ಜಿ ಇಂದ ಪದವಿ ಪೂರ್ವ, ಐಟಿಐ, ಬಿಈಡಿ, ಹೀಗೆ ವಿಸ್ತರಿಸಿಕೊಂಡಿದೆ. ಸರ್ವಿ ಗುರುಗಳ ಸೇವೆ ಯಾವತ್ತೂ ಅಜರಾಮರ” ಎಂದರು.
ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು ಆಶಿರ್ವಚನದಲ್ಲಿ”ಸರ್ವಿ ಹಾಗೂ ಜೇವೂರ ಗುರುಗಳು ಅಂದು ನೆಟ್ಟ ಸಸಿ ಇಂದು ಹೆಮ್ಮರವಾಗಿದೆ. ಇಂತಹ ಮಹತ್ವಪೂರ್ಣ ಕೃತಿ ವೈ ಬಿ.ಕಡಕೋಳರ ಸಂಪಾದತ್ವದಲ್ಲಿ ಬೆಳಕಿನಡೆಗೆ ಹೆಸರಿನಲ್ಲಿ ಹೊರಬಂದಿದ್ದು ಇಂದಿನ ವಿದ್ಯಾರ್ಥಿಗಳಿಗೆ ಇಂತಹ ಗುರುಗಳ ಕುರಿತು ಓದುವ ಮೂಲಕ ಅವರ ಆದರ್ಶಗಳನ್ನು ನೆನೆಯಬೇಕು. ಕಡಕೋಳ ಗುರುಗಳು ಲೂಸಿ ಸಾಲ್ಡಾನಾ ಗುರುಮಾತೆಯ ಕುರಿತು ಬಹಳ ಮಹತ್ವಪೂರ್ಣ ಕೃತಿ ಹೊರತಂದಿದ್ದು ಎಲ್ಲ ವಿದ್ಯಾರ್ಥಿಗಳು ಅಂತಹ ಶಿಕ್ಷಕಿಯ ಕುರಿತು ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಡಕೋಳ ಗುರುಗಳಿಂದ ಇಂತಹ ಇನ್ನೂ ಮಹತ್ವಪೂರ್ಣ ಕೃತಿಗಳು ಮೂಡಿ ಬರಲಿ ಎಂದರು.
ಎಸ್.ವ್ಹಿ.ಚೌಡಾಪೂರ ಗುರುಗಳು ಮಾತನಾಡಿ ತಮ್ಮ ವೃತ್ತಿ ಬದುಕಿಗೆ ಸರ್ವಿ ಗುರುಗಳು ಕಾರಣ ಎಂಬುದನ್ನು ನೆನೆಪಿಸಿಕೊಂಡು ಸರ್ವಿ ಗುರುಗಳ ಬೋಧನೆಯ ಕಾರ್ಯ ವೈಖರಿಯನ್ನು ನೆನೆಯುತ್ತ ಸಕಲ ವಿದ್ಯೆಗಳ ಪಾರಂಗತರು ಎಂದರು. ಪಾಂಡುರಂಗ ಯಲಿಗಾರ ಮಾತನಾಡಿ ಶಿಕ್ಷಣ ವಂಚಿತ ಮಕ್ಕಳ ಮನೆಗಳಿಗೆ ತೆರಳಿ ಅವರನ್ನು ಶಾಲೆಗೆ ಸೇರಿಸುವ ಮಹತ್ವದ ಕಾರ್ಯವನ್ನು ಸರ್ವಿ ಮತ್ತು ಜೇವೂರ ಗುರುಗಳು ಮಾಡಿದರು. ಅಂದಿನ ನಾಡಹಬ್ಬ ನಮ್ಮ ಎಲ್ಲ ಸಹಪಾಠಿಗಳ ಜೊತೆಗೆ ಸರ್ವಿ ಗುರುಗಳು ಸಂಸ್ಕøತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದ ರೀತಿಯನ್ನು ನೆನಪಿಸಿಕೊಂಡು ಅವರು ಅಂದು ಆರಂಭ ಮಾಡಿದ ಶಾಲೆಯಲ್ಲಿ ನಾವು 30 ವಿದ್ಯಾರ್ಥಿಗಳಿದ್ದೆವು. ಇಂದು ಸಮಾಜದಲ್ಲಿ ನಾವೆಲ್ಲರೂ ಉನ್ನತ ಹುದ್ದೆ ಹೊಂದಿದ್ದೇವೆ ಇದಕ್ಕೆ ಕಾರಣ ಸರ್ವಿ ಗುರುಗಳು”ಎಂದರು.
ಸರ್ವಿ ಗುರುಗಳ ವಿದ್ಯಾರ್ಥಿಗಳಾದ ಕೆ.ಎಲ್.ಮಳಗಲಿ, ಎಂ.ಆರ್.ಗೋಪಶೆಟ್ಟಿ, ರವೀಂದ್ರ ಯಲಿಗಾರ, ಲೇಖಕ ವೈ.ಬಿ.ಕಡಕೋಳ, ಸರ್ವಿ ಗುರುಗಳ ಧರ್ಮಪತ್ನಿ ಲೀಲಾತಾಯಿ, ಸುರೇಶ ಜಾವೂರ, ಗುರುನಾಥ ಪತ್ತಾರ, ವೈಎಪ್ ಶಾನುಭೋಗ, ಯಶವಂತ ಗೌಡರ, ರಾಜೇಂದ್ರ ಪಾಟೀಲ, ಸಿ.ಡಿ.ಬೋವಿ, ಎ.ಎ.ಅಣ್ಣೀಗೇರಿ, ಶಂಕರಗೌಡ ಪಾಟೀಲ, ತಾನಾಜಿರಾವ್ ಮುರಂಕರ, ಈರಣ್ಣ ತುಳಜನ್ನವರ ಸೇರಿದಂತೆ ಸರ್ವಿ ಗುರುಗಳ ಮಕ್ಕಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸುಧೀರ ವಾಗೇರಿ ಸ್ವಾಗತಿಸಿದರು, ಬಾಳು ಹೊಸಮನಿ, ಗುರುನಾಥ ಪತ್ತಾರ ಕಾರ್ಯಕ್ರಮ ನಿರೂಪಿಸಿದರು, ಮೋಹನ ಸರ್ವಿ ವಂದಿಸಿದರು.