ಕೃತಿಗಳ ಲೋಕಾರ್ಪಣೆ

(ಸಂಜೆವಾಣಿ ವಾರ್ತೆ)
ಬಾದಾಮಿ,ಆ7 : ಜೀವನದಲ್ಲಿ ಅಸಾಧ್ಯವೆನ್ನುದು ಯಾವುದು ಇಲ್ಲ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವಿದ್ದರೆ ಇಡಿ ಜಗತ್ತೆ ನಮ್ಮನು ಗುರುತಿಸುವಂತಹ ಸಾಧನೆ ಮಾಡಲು ಸಾಧ್ಯ, ಕಡು ಬಡತನದಲ್ಲಿ ಹುಟ್ಟಿ ಜೀವನದಲ್ಲಿ ಏನು ಬೇಕಾದರು ಸಾಧನೆ ಮಾಡಬಹುದು ಎಂದು ಹಿರಿಯ ವಿಜ್ಞಾನಿ ಹಾಗೂ ಸಮೂಹ ನಿರ್ದೇಶಕರು ಬೆಂಗಳೂರ ಸ್ವಾಮಿನಾಯಕ ಹೇಳಿದರು.
ಅವರು ನಗರದ ಶ್ರೀ ಎಸ್.ಬಿ.ಎಂ. ಪದವಿ ಕಾಲೇಜಿನಲ್ಲಿ ಜರುಗಿದ ನಮ್ಮ ಸಾಧನೆ ನಿಮಗೆ ಪ್ರೇರಣೆ ವಿಶೇಷ ಅಭಿಯಾನದ ಅಡಿಯಲ್ಲಿ ಹಳೆಯ ವಿದ್ಯಾರ್ಥಿ ಸಂಘ ಮತ್ತು ಭಾಷಾ ಸಂಗಮ ಸಹಯೋಗದಲ್ಲಿ ಎಲ್.ಪಿ. ಕುಲಕರ್ಣಿ ಅವರ ಕ್ಯೂರಿಯನ್, ವಿಜ್ಞಾನ ವೈಶಿಷ್ಟ್ಯ, ವಿಶಿಷ್ಟ ವಿಜ್ಞಾನಿಗಳ ವಿಭಿನ್ನ ಸಾಧನೆಗಳು ಎಂಬ ವೈಜ್ಞಾನಿಕ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ ಹಾಸನ ಜಿಲ್ಲೆಯ ಪುಟ್ಟ ಗ್ರಾಮದ ಕಡು ಬಡತನದಲ್ಲಿ ಬೆಳೆದು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡುವುದರ ಮೂಲಕ ಇಂದು ವಿಜ್ಞಾನಿಯಾಗಿ ಬೆಳೆಯಲು ಸಾಧ್ಯವಾಯಿತು ಇವತ್ತಿನ ವಿಧ್ಯಾರ್ಥಿಗಳಿಗೆ ಎಲ್ಲರೀತಿಯ ಸೌಲಭ್ಯಗಳಿದ್ದರು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ ಗುರುಗಳ ಮಾರ್ಗದರ್ಶನವನ್ನು ಪಡೆದುಕೊಂಡು ಹೆಚ್ಚು ವಿಭಿನ್ನ ಪುಸ್ತಕಗಳನ್ನು ಓದಿ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಿ ಮೂಬೈಲ್ ಬಳಕೆಯನ್ನು ಕಡಿಮೆ ಮಾಡಿ ಜೀವನದಲ್ಲಿ ಉತ್ತಮ ಸಾಧನೆ ಮಾಡುವುದರ ಮೂಲಕ ನಿಮ್ಮ ಶಾಲೆ ಮತ್ತು ಹೆತ್ತವರಿಗೆ ಕೀರ್ತಿ ತರುವಂತ ಸಾಧನೆಯನ್ನು ಮಾಡಿ ಆಗ ನಿಮ್ಮ ಜೀವನ ಸಾರ್ಥಕವಾಗುವದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ವೀರಪುಲಿಕೇಶಿ ವಿದ್ಯಾ ಸಂಸ್ಥೆ ಉಪ ಚೇರಮನ್ನ ಸುನೀಲ ಕಾರುಡಗಿಮಠ ವಹಿಸಿಕೊಂಡಿದ್ದು ಸಲಹಾಸಮಿತಿ ಸದಸ್ಯರಾದ ಶಾರದಾ ಮೇಟಿ, ಪಂಪಣ್ಣ ಕಾಚಟ್ಟಿ, ಬಂಗಾರಶೆಟ್ಟರ, ಜೆ.ಎಸ್. ಮಮದಾಪೂರ ಸೇರಿದಂತೆ ಲೇಖಕ ಎಲ್.ಪಿ. ಕುಲಕರ್ಣಿ ರಮೇಶ ಪೂಜಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿ.ಡೈಲಿ ನೂಸ್ ಪ್ರಧಾನ ಸಂಪಾದಕ ಡಾ ಮಹ್ಮದಬಾಷಾ ಗೂಳ್ಯಂ, ಕ್ಯೂರಿಯನ್ ಪುಸ್ತಕದ ಬಗ್ಗೆ ಡಾ. ಕರವೀರಪ್ರಭು ಕ್ಯಾಲಕೊಂಡ ವಿಜ್ಞಾನ ವೈಶಿಷ್ಟ್ಯಪುಸ್ತಕ ಕುರಿತು, ವಿಶಿಷ್ಠ ವಿಜ್ಞಾನಗಳ ವಿಭಿನ್ನ ಸಾಧನೆಗಳು ಪ್ರಾಧ್ಯಪಕ ಶಿವುಕುಮಾರ ಅಂಗಡಿ ಕೃತಿಗಳನ್ನ ಪರಿಚಯಿಸಿದರು.
ಪ್ರಾಚಾರ್ಯ ರವೀಂದ್ರ ಮೂಲಿಮನಿ, ಸ್ವಾಗತಿಸಿ ಸಹ ಪ್ರಾಧ್ಯಾಪಕಿ ಸಂಗೀತಾ ಪಾಟೀಲ ನಿರೂಪಿಸಿ ವಂದಿಸಿದರು ಪ್ರಾಧ್ಯಾಪಕ ವೃಂದ ವಿದ್ಯಾರ್ಥಿಗಳು ಸಾಹಿತ್ಯಾಸಕ್ತರು ಭಾಗವಹಸಿದ್ದರು.