ಕೃತಕ ಬುದ್ಧಿಮತ್ತೆ ಬಳಕೆ ಕಾರ್ಯಾಗಾರ

ಧಾರವಾಡ, ಆ18: ಕೆ ಎಲ್ ಎಸ್ ವಿ ಡಿ ಐ ಟಿ ಹಳಿಯಾಳದಲ್ಲಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗಗಳ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮಹಾವಿದ್ಯಾಲಯದ ಎಐ ಆಂಡ್ ಎಮ್‍ಎಲ್ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟೇಶ ಶಂಕರ್ ಮತ್ತು ಸಿವಿಲ್ ವಿಭಾಗದ ಡಾ. ಆಶಿಕ್ ಬಳ್ಳಾರಿ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಡಾ.ವೆಂಕಟೇಶ ಶಂಕರ್ ಅವರು ಕೃತಕ ಬುದ್ಧಿಮತ್ತೆಯ ಕಾರ್ಯವೈಖರಿಯನ್ನು ಉದಾರಣೆ ಸಹಿತ ವಿವರಿಸಿದರು. ಮಾನವನ ಮೆದುಳಿನ ಕಾರ್ಯವೈಖರಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೃತಕ ಬುದ್ಧಿಮತ್ತೆಯನ್ನು ಇಂದು ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯೊಂದಿಗೆ ಆಳವಾದ ಕಲಿಕೆ ಮತ್ತು ಯಂತ್ರ ಕಲಿಕೆಯನ್ನು ಬಳಸುವ ಪರಿಯನ್ನು ತಿಳಿಸಿದರು. ಕೃತಕ ಬುದ್ಧಿ ಮತ್ತೆ ತಂತ್ರಾಂಶದ ಕುರಿತು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಡಾ. ಆಶಿಕ್ ಬಳ್ಳಾರಿಯವರು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ವಿವಿಧ ಶಾಖೆಗಳಾದ ಸಾರಿಗೆ ಇಂಜಿನಿಯರಿಂಗ್, ರಚನಾತ್ಮಕ ಇಂಜಿನಿಯರಿಂಗ್, ಜಿಯೋ ಟೆಕ್ ಇಂಜಿನಿಯರಿಂಗ್, ನೀರಾವರಿ ಇಂಜಿನಿಯರಿಂಗ್ ಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ವಿಧಾನವನ್ನು ಸವಿವರವಾಗಿ ತಿಳಿಸಿದರು. ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನದ ಮೂಲಕ ಕೃಷಿ ಚಟುವಟಿಕೆಗಳಲ್ಲಿ ನೀರನ್ನು ಸಮರ್ಪಕವಾಗಿ ನಿರ್ವಹಿಸಿ ಹೆಚ್ಚಿನ ಬೆಳೆಯನ್ನು ಹೇಗೆ ಪಡೆಯಬಹುದೆಂದು ತಿಳಿಸಿದರು. ಕೃತಕ ಬುದ್ಧಿ ಮತ್ತೆ ತಂತ್ರಾಂಶ ಬಳಸಿ ಕಾಂಕ್ರೀಟ್ ಸಂಕುಚಿತ ಶಕ್ತಿಯ ಮುನ್ಸೂಚನೆ ಪಡೆಯುವುದರ ಪ್ರಾತ್ಯಕ್ಷಿಕೆಯನ್ನು ಸಾದರ ಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ವಿ. ಎ. ಕುಲಕರ್ಣಿ ಅವರು ಕೃತಕ ಬುದ್ಧಿಮತ್ತೆಯನ್ನು ಭವಿಷ್ಯದ ತಂತ್ರಜ್ಞಾನವೆಂದು ಹೇಳಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಇದರ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥರಾದ ಪೆÇ್ರ. ಹರ್ಷ ಜಾದವ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪೆÇ್ರ. ಗಿರೀಶ್ ಚಳಗೇರಿ ಸಂಪನ್ಮೂಲ ವ್ಯಕ್ತಿಗಳ ಕಿರುಪರಿಚಯ ಮಾಡಿದರು. ಕುಮಾರಿ. ಸಂಧ್ಯಾ ನಿರೂಪಿಸಿದರು. ಪೆÇ್ರ. ವಿಜಯಲಕ್ಷ್ಮಿ ಕಾರ್ಯಕ್ರಮ ಸಂಯೋಜಿಸಿದರು.