ಕೃತಕ ಬುದ್ದಿಮತ್ತೆಯಿಂದ ನಾಗರಿಕರ ರಕ್ಷಿಸಿ

ನ್ಯೂಯಾರ್ಕ್, ಮೇ ೫- ಕೃತಕ ಬುದ್ದಿಮತ್ತೆ (ಎಐ)ಯ ಭವಿಷ್ಯದ ಅಪಾಯಗಳ ಕುರಿತು ಆತಂಕ ವ್ಯಕ್ತಪಡಿಸಿರುವ ಸುಂದರ್ ಪಿಚೈ ಸೇರಿದಂತೆ ಅಮೆರಿಕಾದ ಖ್ಯಾತನಾಮ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಿಇಒಗಳು ಇದೀಗ ಶ್ವೇತಭವನಕ್ಕೆ ನಿನ್ನೆ ಮನವಿ ಸಲ್ಲಿಸಿದ್ದಾರೆ. ನಾಗರಿಕರನ್ನು ಎಐ ದುಷ್ಪರಿಣಾಮದಿಂದ ರಕ್ಷಿಸುವಂತೆ ಮನವಿ ಸಲ್ಲಿಸಲಾಗಿದೆ.
ಗೂಗಲ್‌ನ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ ಮತ್ತು ಓಪನ್ ಎಐನ (ಚಾಟ್‌ಜಿಪಿಟಿ) ಸ್ಯಾಮ್ ಆಲ್ಟ್‌ಮನ್ ಮುಂತಾದ ಹಲವು ಸಿಇಒಗಳು ನಿನ್ನೆ ಶ್ವೇತಭವನಕ್ಕೆ ತೆರಳಿ ಮನವಿ ಸಲ್ಲಿಕೆಯಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಾಟ್‌ಜಿಪಿಟಿ ಮತ್ತು ಬಾರ್ಡ್‌ನಂತಹ ಎಐ ಉತ್ಪನ್ನಗಳು ಸಾರ್ವಜನಿಕರ ಕಲ್ಪನೆಯನ್ನೇ ಮೀರಿದ್ದು, ಭವಿಷ್ಯದಲ್ಲಿ ಅಪಾಯಕ್ಕೆ ಎಡೆಮಾಡಿಕೊಡಲಿದೆ ಎನ್ನಲಾಗಿದೆ. ಇಂಥ ಉತ್ಪನ್ನಗಳು ಭವಿಷ್ಯದಲ್ಲಿ ಯೋಚಿಸುವ ಹಾದಿಯನ್ನೇ ಸಂಪೂರ್ಣವಾಗಿ ಬದಲಾಯಿಸಲಿದೆ ಎಂಬ ಆತಂಕ ಇದೀಗ ಎದುರಾಗಿದೆ. ಇವುಗಳು ಕಂಪ್ಯೂಟರ್ ಕೋಡ್ ಅನ್ನು ಡೀಬಗ್ ಮಾಡಬಹುದು, ಪ್ರಸ್ತುತಿಗಳನ್ನು ಬರೆಯಬಹುದು ಮತ್ತು ಕವನವನ್ನು ಕೂಡ ಬರೆಯುವ ಸಾಮರ್ಥ ಹೊಂದಿದ್ದು, ಮೇಲ್ನೋಟಕ್ಕೆ ಇವುಗಳು ಮಾನವನ ಆದೇಶದಿಂದಲೇ ರಚಿತವಾಗಿದೆ ಎಂದು ಕಂಡುಬಂದರೂ ಇವುಗಳ ಹಿಂದೆ ಕೃತಕ ಬುದ್ದಿಮತ್ತೆ ಕೆಲಸ ಮಾಡುತ್ತಿದೆ. ಇವುಗಳು ಮಾರಕಟ್ಟೆಗೆ ಬಿಡುಗಡೆಯಾದಂದಿನಿಂದ ಇವುಗಳ ಭವಿಷ್ಯದ ಕಾರ್ಯಾಚರಣೆಯ ಮೇಲೆ ಹೆಚ್ಚಿನ ಆತಂಕ ಎದುರಾಗಿದೆ. ಇನ್ನು ನಿನ್ನೆ ಶ್ವೇತಭವನಕ್ಕೆ ಆಗಮಿಸಿದ ತಂತ್ರಜ್ಞಾನ ಕಾರ್ಯನಿರ್ವಾಹಕರು, ತಮ್ಮ ಉತ್ಪನ್ನಗಳ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸಂಸ್ಥೆಗಳಿಗೆ ಬಿಟ್ಟ ವಿಚಾರವಾಗಿದೆ. ಆದರೆ ಕೃತಕ ಬುದ್ಧಿಮತ್ತೆಯನ್ನು ಒಳಗೊಳ್ಳಲು ಆಡಳಿತವು ಹೊಸ ನಿಯಮಗಳು ಮತ್ತು ಶಾಸನಗಳಿಗೆ ಮುಕ್ತವಾಗಿದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಈ ಮೂಲಕ ತಂತ್ರಜ್ಞಾನ ಕಾರ್ಯನಿರ್ವಾಹಕರು ಕೃತಕ ಬುದ್ದಿಮತ್ತೆ ನಿಯಂತ್ರಿಸುವ ಸಲುವಾಗಿ ಹೊಸ ಕಾನೂನಿನ ಕ್ರಮ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೊಸ ತಂತ್ರಜ್ಞಾನವು ಸುರಕ್ಷತೆ, ಗೌಪ್ಯತೆ ಮತ್ತು ನಾಗರಿಕ ಹಕ್ಕುಗಳಿಗೆ ಅಪಾಯವನ್ನು ಉಂಟುಮಾಡಬಹುದು. ಆದರೂ ಇದು ಜೀವನವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಖಾಸಗಿ ವಲಯವು ತಮ್ಮ ಉತ್ಪನ್ನಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನೈತಿಕ, ನೈತಿಕ ಮತ್ತು ಕಾನೂನು ಜವಾಬ್ದಾರಿಯನ್ನು ಹೊಂದಿದೆ.
ಕಮಲಾ ಹ್ಯಾರಿಸ್, ಅಮೆರಿಕಾ ಉಪಾಧ್ಯಕ್ಷೆ
(ತಂತ್ರಜ್ಞಾನ ಕಾರ್ಯನಿರ್ವಾಹಕರನ್ನು ಭೇಟಿಯ ಬಳಿಕ)