ಕೃತಕ ಕಾಲು ಜೋಡಣಾ ಶಿಬರ ಯಶಸ್ವಿ

ಕೋಲಾರ,ಜ,೧೧- ಅಂಗವಿಕಲತೆ ಶಾಪವಲ್ಲ. ಮಾನವ ಜನ್ಮ ಶ್ರೇಷ್ಠವಾದುದ್ದು. ಸದಾ ಆಧ್ಯಾತ್ಮಿಕತೆ ಮತ್ತು ಸುಖ ಜೀವನ ನಡೆಸಲು ಭಗವಂತನ ಕೃಪೆ ಇರಲು ಶ್ರೇಷ್ಠ ಕರ್ಮ ಅವಶ್ಯಕತೆ ಇದೆ ಎಂದು ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಶಕುಂತಲಕ್ಕ ತಿಳಿಸಿದರು.
ರೋಟರಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ಮೆಘಾ ಜೈಪುರ ಪುಟ್ ಕ್ಯಾಂಪ್ ಯಶಸ್ವಿಯಾಗಲು ರೋಟರಿ ಸದಸ್ಯರು ಶ್ರಮಿಸುತ್ತಿದ್ದು, ಉಚಿತವಾಗಿ ಬಸ್ ವ್ಯವಸ್ಥೆ ಮತ್ತು ಊಟದ ಉಪಚಾರ ಹಾಗೂ ಅಗತ್ಯವುಳ್ಳ ವಿಕಲಚೇತನರಿಗೆ ಸಂಬಂಧಪಟ್ಟ ಪರಿಕರಗಳನ್ನು ನೀಡುವ ವ್ಯವಸ್ಥೆ ತುಂಬಾ ಹರ್ಷದಾಯಕವಾಗಿದೆ, ಪ್ರತಿಯೊಬ್ಬ ವಿಕಲಚೇತನರು ಶಿಬಿರದ ಉಪಯುಕ್ತತೆ ಪಡೆದುಕೊಳ್ಳಬೇಕೆಂದು ರೋಟರಿ ಅಧ್ಯಕ್ಷ ರೊ. ಬಿ.ಶಿವಕುಮಾರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ರೊ. ಎಸ್.ವಿ. ಸುಧಾಕರ್, ರೊ. ಬೈರೇಗೌಡ ಉಪಸ್ಥಿತರಿದ್ದು, ಆಹಾರ ಪೊಟ್ಟಣಗಳನ್ನು ವಿತರಿಸಿದರು. ಸಂಚಾಲಕರಾದ ವಿ.ಪಿ.ಸೋಮಶೇಖರ್ ನೇತೃತ್ವದಲ್ಲಿ ಮುಂಗೈ ೬ ಮಂದಿಗೆ, ಕೃತಕ ಕಾಲು ೨೦ ವಿಕಲಚೇತನರಿಗೆ, ಪೊಲಿಯೋ ಪೀಡಿತರಿಗೆ ಕ್ಯಾಲಿಪರ್ಸ್‌ಗಳು ನೀಡಲಾಯಿತು. ಅಂಗವಿಕಲ ಕಲ್ಯಾಣ ಅಧಿಕಾರಿ ಮುನಿರಾಜಪ್ಪ ಹಾಗೂ ಎಂ.ಆರ್.ಡಬ್ಲೂ. ರಾಜೇಶ್ ರವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದರು.