ಕೂಸಿನ ಮನೆ ಯಶಸ್ವಿ ನಿರ್ವಹಣೆ: ಪ್ರಶಂಸೆ

ಬೀದರ್:ಜೂ.3: ತಾಲೂಕಿನ ಶ್ರೀಮಂಡಲನಲ್ಲಿ ಕಾರ್ಯನಿರ್ವಸುತ್ತಿರುವ ಕೂಸಿನ ಮನೆ ಕೇಂದ್ರಕ್ಕೆ ಬೀದರ ಜಿಲ್ಲಾ ಪಂಚಾಯತ ಕಾರ್ಯದರ್ಶಿ ಬಿ.ಎಮ್. ಸವಿತಾ ಅವರು ಭೇಟಿ ನೀಡಿ ಮಕ್ಕಳ ಆರೈಕೆದಾರರಿಂದ ಕುಸಿನ ಮನೆಯ ಕಾರ್ಯವೈಖರಿ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ
ಅವರು ಕೂಸಿನ ಮನೆಯ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರುಮಕ್ಕಳಿಗೆ ಆರೈಕೆ ಮಾಡುವ ಸುದೈವ ನಿಮಗೆ ವಲಿದು ಬಂದಿದೆ ಇದನ್ನು ಒಳ್ಳೆರೀತಿಯಲ್ಲಿ ನಿರ್ವಹಿಸಬೇಕು ಎಂದರು.
ಕುಸಿನ ಮನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಜೊತೆ ಕೇಕ್ ಕತ್ತರಿಸುವ ಮೂಲಕ ಖುಷಿ ಹಂಚಿಕೊಂಡರು.
ಶ್ರೀಮಂಡಲ್ ಅಭಿವೃದ್ಧಿ ಅಧಿಕಾರಿಗಳಾದ ಶರತ್ ಅಭಿಮಾನ ಅವರು ಕೂಸಿನ ಮನೆಯ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ ಕಾರ್ಯದರ್ಶಿ ಹನುಮಂತ ಚಿದ್ರಿ,ಗ್ರಾಪಂ ಅಧ್ಯಕ್ಷರಾದ ಮಂಜುನಾಥ ಗುನಶೆಟ್ಟಿ,ತಾಪಂ ಸಂಯೋಜಕರು ಸತ್ಯಜೀತ ನೀಡೋದಿಕರ್, ಸಿಬ್ಬಂದಿಗಳದ ರಾಜಕುಮಾರ ಅಲ್ಲಪುರ್, ಅಬ್ದುಲ್ ಪಟೇಲ್, ಶಿವಕುಮಾರ್,ವಿಜಯಮತಿ, ಮಹಾನಂದ,ಮಾಲಾಶ್ರೀ ಇದ್ದರು