ಕೂಸಿನ ಮನೆ’ ತರಬೇತಿ ಶಿಬಿರ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ12: ಕೂಸಿನ ಮನೆಯ ಕಲ್ಪನೆಯು ಮಕ್ಕಳ ಸಮಗ್ರ ಬೆಳವಣಿಗೆಗೆ ಸಂಬಂಧಿಸಿದ ವಿಷಯವಾಗಿದ್ದು, ಕೆಲಸಕ್ಕೆ ತೆರಳುವ ತಾಯಿಯು ತನ್ನ ಮಕ್ಕಳ ಸಮಗ್ರ ಬೆಳವಣಿಗೆ ಮಾಡಲು ಸಾಧ್ಯವಾಗದ ಮಕ್ಕಳಿಗೆ ಮನೆಯ ವಾತಾವರಣ ಸೃಷ್ಟಿಸುವುದು ಅದನ್ನು ಅನುಸರಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೀಮಪ್ಪ ಲಾಳಿ ಹೇಳಿದರು.
ಹೊಸಪೇಟೆ ತಾಲ್ಲೂಕು ಪಂಚಾಯಿತಿ ವತಿಯಿಂದ ‘ಕೂಸಿನ ಮನೆ’ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ 5 ದಿನಗಳ ತರಬೇತಿಯ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿ, ಬಾಲ್ಯದ ಬೆಳವಣಿಗೆ ಹಂತ ಕುಂಠಿತವಾದರೆ ಮಕ್ಕಳು ತಮ್ಮ ಜೀವನಪೂರ್ತಿ ಶೋಷಣೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ಅಂತಹ ಮಕ್ಕಳನ್ನು ಕೂಸಿನ ಮನೆಗಳ ಮೂಲಕ ಸಮಗ್ರ ಬೆಳವಣಿಗೆ ಮಾಡುವ ಉದ್ದೇಶದಿಂದ ಈ ಕೂಸಿನ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ತರಬೇತಿ ಪಡೆದವರು ಮಕ್ಕಳ ಸಮಗ್ರ ಅಭಿವೃದ್ಧಿಯಲ್ಲಿ ತಮ್ಮ ಸೇವೆ ಅತ್ಯಂತ ಮಹತ್ವ ಎಂದರು.
6 ತಿಂಗಳಿಂದ 3 ವರ್ಷದ ಮಕ್ಕಳು ಈ ಕೂಸಿನ ಮನೆಗೆ ದಾಖಲಾತಿ ಗುರಿ ಹೊಂದಿದ್ದು, ಮೊದಲ ಆದ್ಯತೆಯನ್ನು ಕಾರ್ಯನಿರತ ತಾಯಿಯ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಕೂಸಿನ ಮನೆಯಲ್ಲಿ ಪೌಷ್ಟಿಕತೆ, ಆರೋಗ್ಯ, ಸ್ವಚ್ಚತೆ, ಸುರಕ್ಷತೆ, ಶಿಕ್ಷಣದ ಪರಿಕಲ್ಪನೆ ಮೂಲಕ ಮಕ್ಕಳ ಸಮಗ್ರ ಅಭಿವೃದ್ದಿಯನ್ನು ಹಮ್ಮಿಕೊಂಡ ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ಮಾಡಬೇಕಿದೆ ಎಂದರು. ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಜಿಲ್ಲಾ ಐಇಸಿ ಸಂಯೋಜಕ ಫಾಜೀಲ್ ಅಹ್ಮದ್, ತಾಲ್ಲೂಕು ಐಇಸಿ ಸಂಯೋಜಕ ಹೆಚ್ ನಾಗರಾಜ್, ವಿಷ್ಣು, ಸುಪರ್‍ವೈರಸ್ ಅಂಬುಜ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.