ಕೂಲಿ ಕೆಲಸ ಮಾಡುತ್ತಿರುವ ಪದ್ಮಶ್ರೀ ಮಾಂತ್ರಿಕ ದರ್ಶನಂ

ನವದೆಹಲಿ,ಮೇ.೨೪- ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪಡೆದ ತೆಲುಗಿನ ಗಾಯಕ ಕಿನ್ನರ ಮಾಂತ್ರಿಕ ದರ್ಶನಂ ಮೊಗುಲಯ್ಯ ಜೀವನೋಪಾಯಕ್ಕೆ ಕೂಲಿ ಕೆಲಸ ಮಾಡುತ್ತಿದ್ದಾರೆ.
೨೦೨೨ ರಲ್ಲಿ ಆಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ದರ್ಶನಂ ಮೊಗುಲಯ್ಯ ಅವರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಪದ್ಮಶ್ರೀ ಮತ್ತು ಸರ್ಕಾರದಿಂದ ೧ ಕೋಟಿ ನಗದು ಬಹುಮಾನ ಪಡೆದಿದ್ದರು. ಈಗ ಎರಡು ವರ್ಷಗಳ ನಂತರ, ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವ ಸಂಗತಿ ಬಯಲಾಗಿದೆ.
ಹೈದರಾಬಾದ್‌ನಲ್ಲಿ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ, ಈ ನಡುವೆ ಬೆವರಿನಿಂದ ಒದ್ದೆಯಾದ ಮುದುಕನೊಬ್ಬ ನಿರ್ಮಾಣ ಸ್ಥಳದಲ್ಲಿ ಸಿಮೆಂಟ್ ಮತ್ತು ಮರಳನ್ನು ಮಿಶ್ರಣ ಮಾಡಲು ಗುದ್ದಲಿ ಬಳಸುತ್ತಿದ್ದ ವ್ಯಕ್ತಿಯನ್ನು ಹಲವು ಗುರುತು ಹಿಡಿದಾಗ ಆತ ಪದ್ಮಶ್ರೀ ವಿಜೇತ ಮುಗುಲಯ್ಯ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
ಬುಡಕಟ್ಟು ಸಂಗೀತ ವಾದ್ಯವಾದ ಕಿನ್ನೇರ ನುಡಿಸುವ ಕೆಲವೇ ಕೆಲವು ಸಂಗೀತ ಮತ್ತು ಹಾಡುಗಾರರಲ್ಲಿ ಮೊಗುಲಯ್ಯ ಕೂಡ ಒಬ್ಬರು. ನಿಗರ್ವಿ ಮನುಷ್ಯ ಒಬ್ಬ ಕೆಲಸಗಾರರು ಎನ್ನುವ ಸಂಗತಿ ತಿಳಿದಿರಲಿಲ್ಲ ಎಂದು ಅದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಿಳಿಸಿದ್ದಾರೆ.
ದರ್ಶನಂ ಮೊಗುಲಯ್ಯ ಅವರು ಹೈದರಾಬಾದ್‌ನಲ್ಲಿ ದುಡಿಯುತ್ತಿರುವ ವೀಡಿಯೊ ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾಗ ಅವರ ಈ ಕಷ್ಟ,ಸಂಕಟ ಬೆಳಕಿಗೆ ಬಂದಿದೆ.
ಕೆಲಸದ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ, ೭೨ ವರ್ಷ ವಯಸ್ಸಿನ ದರ್ಶನಂ ಮೊಗುವಲಯ್ಯ ತಮ್ಮ ಜೀವನೋಪಾಯದ ಮುಖ್ಯ ಮೂಲವಾದ ಕಿನ್ನೇರದೊಂದಿಗೆ ಆಗಾಗ ಪ್ರದರ್ಶನವನ್ನೂ ನೀಡುತ್ತಿದ್ದಾರೆ.