ಕೂಲಿ ಕೆಲಸ ನೀಡುವಂತೆ ಮಹಿಳೆಯರಿಂದ ಗ್ರಾ.ಪಂ.ಗೆ ಮುತ್ತಿಗೆ

ಅರಕೇರಾ.ಏ೨೧-ಸ್ಥಳಿಯ ಗ್ರಾಮ ಪಂಚಾಯತಿ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಅರಕೇರಾ ಗ್ರಾಮ ಪಂಚಾಯತಿಗೆ ನೂರಾರು ಮಹಿಳೆಯರು ಗ್ರಾಪಂಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಸುಮಾರು ವರ್ಷಗಳಿಂದ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸಗಳನ್ನು ನೀಡಿಲ್ಲ ಅಧಿಕಾರಿಗಳು ಜನ ಪ್ರತಿನಿಧಿಗಳು ತಮಗೆ ಮನಬಂದಂತೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಎಂದು ಆಗ್ರಹಿಸಿದರು.
ಬಡ ಜನರ ಜೀವನ ಸುಧಾರಣೆಗೆ ಸರ್ಕಾರ ತಂದಿರುವ ಯೋಜನೆಗಳು ಅರ್ಹರಿಗೆ ತಲುಪದೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು. ಗ್ರಾಮದಲ್ಲಿ ಸಾವಿರಾರು ಜಾಬ್ ಕಾರ್ಡ್ ಹೊಂದಿದ್ದರು ಸಹ ಕೆಲಸ ನೀಡಿದೆ ಕಾರಣ ಕೂಲಿಗಾಗಿ ಬೆರೆ ಸ್ಥಳಗಳಿಗೆ ಹೋಗಿ ಕೂಲಿಯಿಂದ ನಮ್ಮ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು. ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ನಮ್ಮ ಹೆಸರನ್ನು ನೊಂದಾಯಿಸಿದ್ದರು ಸಹ ನಮಗೆ ಕೂಲಿ ಕೆಲಸ ನೀಡುತ್ತಿಲ್ಲ. ಯೋಜನೆಗಳ ದುರ್ಬಳಕೆಯಾಗಿತ್ತಿದೆ. ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸಗಳನ್ನು ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು ಗ್ರಾಮೀಣ ಪ್ರದೇಶದ ಬಡ ಜನರನ್ನು ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ನರೇಗಾ ಯೋಜನೆ ಜಾರಿಗೊಳಿಸಿದೆ ಆದರೆ ಕೂಲಿಕಾರರಗೆ ಕೆಲಸ ನೀಡುತ್ತಿಲ್ಲ ಇದರಿಂದ ಕೆಲಸಕ್ಕಾಗಿ ಬೇರೆಕಡೆಗೆ ಹೋಗಬೇಕಾಗುತ್ತದೆ.