ಕೂಲಿ ಕಾರ್ಮಿರಿಗೆ ಆರೋಗ್ಯ ತಪಾಸಣೆ

ಮಾನ್ವಿ,ಜೂ.೧೫-
ಮುಷ್ಟೂರು ಗ್ರಾಮದಲ್ಲಿ ಕೂಲಿ ಕಾರ್ಮಿಕರು ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದ ಪಕ್ಕದಲ್ಲಿರುವ ಶ್ರೀ ಮಾರೆಮ್ಮ ದೇವಸ್ದಾನ ಹತ್ತಿರ ಉಚಿತ ಆರೋಗ್ಯ ಶಿಬಿರಾ ಅಯೋಜಿಸಿ ಈರೇಶ ಅವರು ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಕೂಲಿಕಾರರಿಗೆ ಕೆಲಸ ಒದಗಿಸಲಾಗುತ್ತಿದೆ, ಅಲ್ಲದೇ ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬಿರವನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ,ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಎಲ್ಲಾ ಅರೋಗ್ಯ ಅಧಿಕಾರಿಗಳು, ಸಿಬ್ಬಂದಿಯವರೊಂದಿಗೆ ಸೌಲಭ್ಯ ಒದಗಿಸಲಾಯಿತು. ನಂತರ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಬರುವ ಕೂಲಿ ಹಾಗೂ ಅನುಕೂಲಗಳ ಕುರಿತು ಮಾಹಿತಿ ನೀಡಲಾಯಿತು. ಹಾಗೂ ಚಂದ್ರಶೇಖರಯ್ಯ ಸೋಪಿಮಠ ಎಸ್,ಬಿ,ಎಯ್ ಬ್ಯಾಂಕ್ ನ ಸಾಕ್ಷರತ ಸಲಹೆಗಾರರು ಬ್ಯಾಂಕ್‌ನ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ಅಯ್ಯಪ್ಪ, ಈರೇಶ ಐಇಸಿ ಸಂಯೋಜಕರು, ಶ್ರೀ ಕಾಂತ ಮತ್ತು ಪವಿತ್ರಾ ಸಮುದಾಯ ಅರೋಗ್ಯ ಅಧಿಕಾರಿಗಳು,ಕೆ.ಹೆಚ್.ಪಿ,ಟಿ,ಮರಿಲಿಂಗಣ್ಣ,ಬಸವರಾಜ ಕರವಸೂಲಿಗಾರರು,ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಹನುಮಂತಿ ಮತ್ತು ಆನಿತಾ ಆಶಾ ಕಾರ್ಯಕರ್ತರು,ದೇಶಂದ್ರಿ ಹಾಗೂ ಯಲ್ಲಮ್ಮ ಮತ್ತು ನರೇಗಾ ಮೇಟ್ ಕೂಲಿಕಾರರು ಹಾಜರಿದ್ದರು.