ಕೂಲಿ ಕಾರ್ಮಿಕ ದಂಪತಿಗಳ ಬರ್ಬರ್ ಹತ್ಯೆ

ಮುದ್ದೇಬಿಹಾಳ:ನ.18: ತಾಲ್ಲೂಕಿನ ಮುದ್ನಾಳ ವ್ಯಾಪ್ತಿಯ ಹಳ್ಳದ ತಾಂಡಾದ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಗಳ ಬರ್ಬರ್ ಹತ್ಯೆ ನಡೆದಿದೆ ಭಾನುವಾರ ರಾತ್ರಿ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಈ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.
ಹತ್ಯೆಯಾದ ದಂಪತಿಗಳು ನಾರಾಯಣಪುರದ ಬಸರಿಗಿಡ ತಾಂಡಾದ ನಿವಾಸಿಗಳೆಂದು ತಿಳಿದು ಬಂದಿದ್ದು ಶಾಂತಿಲಾಲ ದೇವಲಪ್ಪ ರಾಠೋಡ( 50)ಮಡದಿ ರುಕ್ಮಿಣಿ ಶಾಂತಿಲಾಲ ರಾಠೋಠ (45)ಇಬ್ಬರು ಕಳೆದ ವರ್ಷಗಳಿಂದ ಹಳ್ಳದ ತಾಂಡಾದಲ್ಲಿ ಕೂಲಿ ಕೆಲಸಮಾಡುತ್ತಿದ್ದರು ಇವರ ಹತ್ಯೆಗೆ ಕಾರಣ ತಿಳಿದು ಬಂದಿರುವುದಿಲ್ಲ ಘಟನಾ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಧಿಕಾರಿ ಭೇಟಿ ನೀಡಿದ್ದು ಪ್ರಕರಣ ಮುದ್ದೇಬಿಹಾಳ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಪೋಲಿಸ ಇಲಾಖೆಯವರು ತಿಳಿಸಿದ್ದಾರೆ.