
ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಪೆ.23: ನರೇಗಾ ಕೆಲಸ ಮಾಡುವ ಪ್ರತಿಯೊಬ್ಬ ಕೂಲಿ ಕಾರ್ಮಿಕರ ಅರೋಗ್ಯ ಮುಖ್ಯ ಎಂದು ಚಿತ್ರದುರ್ಗ ಜಿ.ಪಂ ಸಿಇಓ ದಿವಾಕರ್ ತಿಳಿಸಿದರು.
ಅವರು ತಾಲೂಕಿನ ತಮ್ಮೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೋನಾಪುರ ಗ್ರಾಮದ ಕೆರೆಯಲ್ಲಿ ನರೇಗಾ ಯೋಜನೆಯಲ್ಲಿ ನಡೆಯುವ ಹೂಳೆತ್ತುವ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಅಳತೆ ಮತ್ತು ಆಳವನ್ನು ಪರಿಶೀಲಿಸಿ ಕೂಲಿ ಕಾರ್ಮಿಕರ ಅರೋಗ್ಯ ವನ್ನು ವಿಚಾರಿಸಿ ತಾವೇ ಖುದ್ದು ಅವರ ಅರೋಗ್ಯ ತಪಾಸಣೆ ಮಾಡಿದರು.
ಕೂಲಿ ಕಾರ್ಮಿಕರು ತಮ್ಮ ಅರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು , ಕಾಮಗಾರಿ ಕೆಲಸ ಮಾಡುವ ಪ್ರತಿಯೊಬ್ಬರು ಅರೋಗ್ಯದ ಬಗ್ಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಪರಿಶೀಲನೆ ನಡೆಸಬೇಕು ಇದು ಪ್ರತಿ ದಿನ ಕಾಮಗಾರಿ ಕೆಲಸ ಪ್ರಾರಂಭಿಸುವ ಮುನ್ನ ಕೂಲಿ ಕಾರ್ಮಿಕರ ತಪಾಸಣೆ ಮಾಡಬೇಕು ಮತ್ತು ಪ್ರಥಮ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆ ಪೂರಕವಾಗಿರಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಓ ಜಾನಕೀ ರಾಮ್ ಪಿಡಿಒ ಎನ್. ಗುಂಡಪ್ಪ ಮತ್ತು ಸಿಬ್ಬಂದಿ ಮತ್ತು ಕೂಲಿ ಕಾರ್ಮಿಕರಿದ್ದರು.
ನಂತರ ಸಿಇಓ ರವರು ರಾಂಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿನ ರೋಗಿಗಳ ಯೋಗ ಕ್ಷೇಮವನ್ನು ವಿಚಾರಿಸಿ ಸಿಬ್ಬಂದಿ ಗಳ ಕರ್ತವ್ಯದ ಬಗ್ಗೆ ಪರಿಶೀಲಿಸಿದರು . ಬಾಣಂತಿ ಮತ್ತು ಶಿಶು ಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಿಬ್ಬಂದಿ ಗೆ ತಿಳಿಸಿ ಆಸ್ಪತ್ರೆಯ ಜನ ಔಷಧಿ ಪರಿಕರಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.