ಕೂಲಿ ಕಾರ್ಮಿಕರೂ ಆರೋಗ್ಯವಂತರಾಗಿದ್ದಲ್ಲಿ ಮಾತ್ರ ನರೇಗಾ ಯೋಜನೆ ಅನುಷ್ಟಾನ

(ಸಂಜೆವಾಣಿ ವಾರ್ತೆ)
ಬೀದರ್: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಸ್ವಲಂಭನೆಯ ಜೊತೆಗೆ ಅವರ ಆರೋಗ್ಯವನ್ನು ಕಾಪಾಡುವ ಜವ್ದಾರಿಯನ್ನು ಸಹ ಸರ್ಕಾರ ತೆಗೆದುಕೊಂಡಿದೆ ಎಂದು ಬೀದರ ತಾಲೂಕು ಪಂಚಾಯಿತಿಯ ನರೇಗಾ ಸಹಾಯಕ ನಿರ್ದೇಶಕರು ಲಕ್ಷ್ಮೀ ಬಿರಾದಾರ ಹೇಳಿದರು.
ಅವರು ಮಂಗಳವಾರ ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನದಡಿ ಬೀದರ ತಾಲ್ಲೂಕಿನ ಯದಲಾಪುರ ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ಕೈಗೊಂಡ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿ ಕಾರ್ಮಿಕರಿಗಾಗಿ ಹಮ್ಮಿಕೊಂಡ ಆರೋಗ್ಯ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದರು.
ಕೂಲಿ ಕಾರ್ಮಿಕರು ಕೆಲಸ ಹಾಗೂ ಕುಟುಂಬ ನಿರ್ವಹಣೆಯ ಜಂಜಾಟದ ಮಧ್ಯೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲಾ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದರು.
ಆರೋಗ್ಯದ ತಪಾಸಣೆ ಅಭಿಯಾನದ ಮುಖ್ಯ ಉದ್ದೇಶ ಕಾರ್ಮಿಕನ್ನು ಆರೋಗ್ಯವಂತರನ್ನಾಗಿಸುವು ಈ ತಪಾಸಣೆ ಸಂದರ್ಭದಲ್ಲಿ ಯಾರಿಗಾದರೂ ಕಾಯಿಲೆಗಳು ಕಂಡುಬಂದಲ್ಲಿ ಅವರು ಆರೋಗ್ಯ ಇಲಾಖೆಯಿಂದ ಸೂಕ್ತವಾದ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯತ ಕಾರ್ಯದರ್ಶಿ ಗಂಗಾಧರ,ಬಿಲ್ ಕಲೆಕ್ಟರ್ ಲಕ್ಷ್ಮಣ ಹೊನ್ನಾ, ಸಿಎ??? ಉಪೇಂದ್ರ ರಾಥೊಡ, ಪಿಎ??? ಸವಿತಾ ಜಾಧವ, ಹೆ???ಓ ರವೀಂದ್ರಕುಮಾರ, ಕೆ.ಎಚ್.ಪಿ.ಟಿ ಸುಜಾತ, ಐಇಸಿ ಸಂಯೋಜ ಸತ್ಯಜೀತ್ ಸೇರಿದಂತೆ ಇತರರು ಉಪಸ್ಥಿತರಿದ್ದರು