ಕೂಲಿ ಕಾರ್ಮಿಕರಿದ್ದ ಪಿಕಪ್ ಪಲ್ಟಿ:ಹಲವರಿಗೆ ಗಾಯ

ಕರಜಗಿ :ಜ.11:ಗ್ರಾಮದಲ್ಲಿ ಕೆಲಸದ ಕೊರತೆ ಇದೆ.ಅಲ್ಲದೇ ಕೂಲಿ ಸರಿಯಾಗಿ ಸಿಗುವುದಿಲ್ಲ,ಪಕ್ಕದ ಗ್ರಾಮದ ಜಮೀನುಗಳಿಗೆ ಹೋಗಿ ಕೆಲಸ ಮಾಡಿದರೆ ಹೆಚ್ಚು ಕೂಲಿ ಸಿಗುತ್ತದೆ ಎಂದು ಪಿಕಾಪ್ ನಲ್ಲಿ ಕೂಲಿ ಕೆಲಸಕ್ಕೆ ಹೊರಟಿದ್ದ ಮಹಿಳೆಯರು ಏಕಾಏಕಿ ಪಿಕಾಪ್ ಟಾಯರ್ ಸ್ಪೋಟಗೊಂಡು ಪಲ್ಟಿ ಹೊಡೆದ ಪರಿಣಾಮ ಪಿಕಾಪ್ ನಲ್ಲಿದ್ದ 40 ಮಹಿಳೆಯರಲ್ಲಿ 25 ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಬಾರಿ ಅನಾಹುತ ತಪ್ಪಿದೆ.ತಾಲೂಕಿನ ಮಾಶಾಳ ಗ್ರಾಮದ ಅಶೋಕ ತಾಂಡಾದ ನಿವಾಸಿಗಳಾಗಿರುವ ಇವರು ಪ್ರತಿ ದಿನದಂತೆ ಬುಧವಾರ ಬೆಳಿಗ್ಗೆ 10 ಗಂಟೆಗೆ ಪಿಕಾಪ್ ನಲ್ಲಿ ಕೂಲಿ ಕೆಲಸಕ್ಕೆ ಹೊರಟಿದ್ದ ಸಂದರ್ಭದಲ್ಲಿ ಮಾಶಾಳ ಗ್ರಾಮದ ಹೊರವಲಯದಲ್ಲಿ ಏಕಾಏಕಿ ಟಾಯರ್ ಸ್ಫೋಟಗೊಂಡು ವಾಹನ ರಸ್ತೆ ಪಕ್ಕದಲ್ಲಿ ಹೋಗಿ ಪಲ್ಟಿ ಹೊಡೆದಿದ್ದು, ಪಿಕಾಪ್ ನಲ್ಲಿದ್ದ 25 ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,5 ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು,ತಕ್ಷಣ ರಸ್ತೆ ಮೇಲೆ ಸಂಚಾರ ಮಾಡುತ್ತಿದ್ದ ಪ್ರಯಾಣಿಕರು ಗಮನಿಸಿ ಒಬ್ಬೊಬ್ಬರನ್ನಾಗಿ ಹೊರಗಡೆ ತೆಗೆದು ಅಂಬುಲೆನ್ಸ್ ಮತ್ತು ಸ್ಥಳೀಯ ಖಾಸಗಿ ವಾಹನದಲ್ಲಿ ಮಹಿಳೆಯರಿಗೆ ಅಫಜಲಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.ಆಸ್ಪತ್ರೆಗೆ ಬಂದ ಮಹಿಳೆಯರಿಗೆ ವೈದ್ಯರು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದ್ದಾರೆ.ಕೆಲವು ಜನರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಆದರೆ ಪಿಕಾಪ್ ಪಲ್ಟಿ ಹೊಡೆದಿದ್ದು ನೋಡಿದರೆ ಬಾರಿ ಅನಾಹುತ ತಪ್ಪಿದಂತಾಗಿದೆ.

ಈ ದುರ್ಘಟನೆ ಸಂಭವಿಸಿದ ಮೇಲೆ ಅಫಜಲಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ತಿಳಿದು ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಆಸ್ಪತ್ರೆಗೆ ದೌಡಾಯಿಸಿ ಮಹಿಳೆಯರ ಆರೋಗ್ಯ ವಿಚಾರಿಸಿ ವೈದ್ಯರ ಜತೆ ಚರ್ಚೆಸಿ ಒಳ್ಳೆಯ ಗುಣಮಟ್ಟದ ಚಿಕಿತ್ಸೆ ನೀಡಿ,ಒಂದು ವೇಳೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದರೆ ತಡ ಮಾಡದೆ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಎಂದು ವೈದ್ಯರಿಗೆ ಹೇಳಿ ಬಾರಿ ಅನಾಹುತ ತಪ್ಪಿದೆ.ಯಾರು ಸಹ ಭಯಪಡಬೇಡಿ.ನಿಮಗೆ ಒಳ್ಳೆಯ ಚಿಕಿತ್ಸೆಗಾಗಿ ಕೊಡಿಸುವುದಾಗಿ ನಮ್ಮ ಜವಾಬ್ದಾರಿಯಾಗಿದೆ.ನಿಮ್ಮ ಚಿಕಿತ್ಸೆಗಾಗಿ ಯಾವುದೇ ಸಹಾಯ ಮಾಡಲು ಸದಾ ಸಿದ್ಧನಿದ್ದೇನೆ ಎಂದರು.


ಕೂಲಿ ಕೆಲಸಕ್ಕೆ ಮಹಿಳೆಯರಿಗೆ ವಾಹನದಲ್ಲಿ ಕರೆದುಕೊಂಡು ಹೋಗುವಾಗ ವಾಹನದ ಮಾಲೀಕರು ಕುರಿ ಹಿಂಡನಂತೆ ತುಂಬಿಕೊಂಡು ಹೋಗುತ್ತಿದ್ದಾರೆ.ಆದರೆ ಇದಕ್ಕೆ ಆರ್ ಟಿಓ ಹಾಗೂ ಪೆÇಲೀಸ್ ಇಲಾಖೆಯವರು ಕಡಿವಾಣ ಹಾಕಬೇಕು.ವಾಹನದ ಸಾಮಥ್ರ್ಯಕಿಂತ ಹೆಚ್ಚು ಮಹಿಳೆಯರು ತುಂಬಿಕೊಂಡು ಹೋಗುತ್ತಿರುವುದರಿಂದ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ.ಇನ್ನೂ ಮುಂದೆ ಇಂತಹ ದುರ್ಘಟನೆಗಳು ಮರುಕಳಿಸಿದೆ ನೇರವಾಗಿ ನೀವೇ ಹೊಣೆಗಾರಿಕೆ ಹೊರಬೇಕಾಗುತ್ತದೆ.ಈಗಾಗಲೇ ನಾನು ಆಸ್ಪತ್ರೆಯ ವೈದ್ಯರ ಜತೆ ಮಾತನಾಡಿ ಮಹಿಳೆಯರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ತಿಳಿಸಲಾಗಿದೆ.
-ಅರುಣಕುಮಾರ ಎಂ.ವೈ.ಪಾಟೀಲ್, ಕೆಪಿಸಿಸಿ ಸದಸ್ಯರು.