ಕೂಲಿ ಕಾರ್ಮಿಕರಿಗೆ ಜಾಗ ಮಂಜೂರು ಮಾಡಲು ಆಗ್ರಹ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ09: ಹಳೇ ಮಲಪನಗುಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸ ಮಾಡುವ ಕೂಲಿ ಕಾರ್ಮಿಕರಿಗೆ ಖಾಲಿ ನಿವೇಶನ ಮಂಜೂರು ಮಾಡುವಂತೆ ಕಾರ್ಮಿಕರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ನೂರಾರು ಸಂಖ್ಯೆ ಕಾರ್ಮಿಕರು ತಾಲೂಕು ಪಂಚಾಯಿತಿಯ ಮುಂದೆ ಕೆಲ ಕಾಲ ಪ್ರತಿಭಟನೆ ಮಾಡಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಳೆದ ಎರಡು ಮೂರು ವರ್ಷಗಳಿಂದ ನಾವು ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುವ ನಮಗೆ ಎಲ್ಲಿಯಾದರೂ ಸರ್ಕಾರಿ ಚಾಗವನ್ನು ಹೂಡಿಕಿ ಹಕ್ಕು ಪತ್ರಗಳನ್ನು ನೀಡುವಂತೆ ಕೋರಿದ್ದು ಯಾವುದೆ ಪ್ರಯೋಜನವಾಗಿಲ್ಲಾ, ಇದರಿಂದ  ಕೂಲಿ ಕಾರ್ಮಿಕರು ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಪ್ರತಿಭಟನಾ ನಿರತರು ತಮ್ಮ ಗೋಳು ತೋಡಿಕೊಂಡರು.
ನೀಡುವ ಕೆಲಸವೂ ನಿರಂತರವಾಗಿಲ್ಲಾ  ಮತ್ತು ಕೂಲಿಯೂ ಸರಿಯಾಗಿ ಪಾವತಿಸುತ್ತಿಲ್ಲಾ ಇಂತಹ ಸನ್ನಿವೇಶದಲ್ಲಿ ನಮ್ಮ ಸ್ವಂತ ನಿವೇಶವಿದ್ದರೆ ಏಯೋ ಜೀವನ ಸಾಗಿಸಬಹುದಿತ್ತು ಈ ನಿಟ್ಟಿನಲ್ಲಿ ಮಲಪನಗುಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸರ್ಕಾರಿ ಜಾಗವನ್ನು ಹೂಡುಕಿ ಬಡ ಕೂಲಿ ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿ.ಭಾಗ್ಯಮ್ಮ, ಪದ್ಮಾವತಿ, ಪಿ.ಕವಿತಾ, ದುರಗವ್ವ ಸೇರಿದಂತೆ ನೂರಾರು ಸಂಖ್ಯೆಯ ಕೂಲಿ ಕಾರ್ಮಿಕರು ಹಾಜರಿದ್ದರು.