ಕೂಲಿ ಕಾರ್ಮಿಕರಿಗೆ ಕಂಬಳಿ ವಿತರಣೆ

ಸಿಂದಗಿ;ಡಿ.29: ಉಪಕಾರಕ್ಕೆ ಪ್ರತ್ಯುಪಕಾರ ಮಾಡುವುದೇ ಮಾನವತೆ ಅಲ್ಲ, ಉಪಕಾರ ವಿಲ್ಲದೆ ಜನರಿಗೆ ಪ್ರತ್ಯುಪಕಾರ ಮಾಡುವುದೆ ಮಾನವೀಯತೆ ಸೇವೆ. ಒಳ್ಳೆಯ ವ್ಯಕ್ತಿಯು ಇತರರಿಗೆ ಸೇವೆ ಸಲ್ಲಿಸುವ ಮನೋಭಾವವನ್ನು ಹೊಂದಿರುತ್ತಾನೆ. ಮಾನವರಿಗೆ ಸೇವೆ ಸಲ್ಲಿಸುವುದು ಒಂದು ದೊಡ್ಡ ಕಾರ್ಯವಾಗಿದೆ ಎಂದು ಮೌಲಾನಾ ದಾವೂದ ನದ್ವಿ ಹೇಳಿದರು.
ತಾಲೂಕಿನ ಯರಗಲ್ಲ್ ಬಿಕೆ. ಗ್ರಾಮದಲ್ಲಿ ಅಖಿಲ ಭಾರತ ಮಾನವೀಯತೆಯ ಸಂದೇಶ ವೇದಿಕೆ ಸಿಂದಗಿ ಶಾಖೆ ವತಿಯಿಂದ ಕೂಲಿ ಕಾರ್ಮಿಕರಿಗೆ ರಗ್ಗು ( ಕಂಬಳಿ) ವಿತರಿಸಿ ಮಾತನಾಡಿ, ಅಖಿಲ ಭಾರತ ಮಾನವೀಯತೆಯ ಸಂದೇಶ ವೇದಿಕೆ ಶುದ್ಧ ಮಾನವೀಯತೆಗೆ ಸೇವೆ ಸಲ್ಲಿಸುವ ಉದ್ದೇಶವಾಗಿದೆ. ಯಾವುದೇ ಸಮಾಜದ ಸೇವೆಯ ಮುಖಾಂತರ ಶಾಂತಿ, ಸಹೋದರತೆ ಮತ್ತು ಪ್ರೀತಿಯ ವಾತಾವರಣವನ್ನು ಸ್ಥಾಪಿಸಲು ಬಯಸುವದು. ಇಂದು ಎಲ್ಲರೂ ಸ್ವಾರ್ಥಿಗಳಾಗುತ್ತಿದ್ದಾರೆ. ನಾವು ಜಾತಿ ಮತ್ತು ಧರ್ಮಕ್ಕಿಂತ ಮೇಲೇರಿ ನಾವೆಲ್ಲರೂ ಒಟ್ಟಾಗಿ ಪ್ರೀತಿಯ ವಾತಾವರಣವನ್ನು ಸೃಷ್ಟಿಸೋಣ.ಇದು ನಮ್ಮ ಸಮಾಜವನ್ನು ಉತ್ತಮಗೊಳಿಸುತ್ತದೆ. ಇದರಿಂದ ಸುಂದರವಾದ ನಗರವಾಗಲು ಸಾಧ್ಯ ಎಂದರು.
ಮೌಲಾನಾ ಕಲಿಮುಲ್ಲಾ ನದ್ವಿ ಮಾತನಾಡಿ, ನಾವೆಲ್ಲರೂ ಪ್ರೀತಿ ಭಾತೃತ್ವದಿಂದ ಸಮಾಜದಲ್ಲಿ ತೊಡಗಿದರೆ ಸಮೃದ್ಧ ಜೀವನವನ್ನು ನಡೆಸುತ್ತೇವೆ. ಆ ಕಾರಣಕ್ಕಾಗಿ ಈ ಸಂಸ್ಥೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಎನ್ನುವ ಮಾನವೀಯತೆಗೆ ಸೇವೆ ಸಲ್ಲಿಸುವ ಭರವಸೆ ನೀಡಿದರು.
ಮಾಸ್ಟರ್ ಪಿಯೂಷ್ ಮಿಸ್ರಾಮ್ ಅವರು ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ’ಯ ಪರಿಚಯ ನೀಡಿದರು. ವೇದಿಕೆಯ ಸದಸ್ಯರು ಮತ್ತು ಊರಿನ ಜನರು ಉಪಸ್ಥಿತರಿದ್ದರು.