ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ

ಬೀದರ್:ಜೂ.5: ತಾಲೂಕಿನ ಚಿಮಕೋಡ ಗ್ರಾಮ ಪಂಚಾಯತಿನಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ನರೇಗಾ ಕೂಲಿಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.
ಚಿಮಕೋಡ ಗಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಗೀತಾ ಕೆ ಮಾತನಾಡಿ ಆರೋಗ್ಯ ಇಲಾಖೆ ಹಾಗೂ ಪಂಚಾಯತ ರಾಜ ಇಲಾಖೆ ಇವರ ಸಹಭಾಗಿತ್ವದಲ್ಲಿ ಈ ಆರೋಗ್ಯ ತಪಾಸಣೆ ಕೈಗೊಂಡಿದ್ದು ಇದರ ಉಪಯೋಗ ಎಲ್ಲಾ ನರೇಗಾ ಕೂಲಿ ಕಾರ್ಮಿಕರೂ ಪಡೆಯಬೇಕು ಎಂದು ಹೇಳಿದರು.
ಈ ವೇಳೆ ಗ್ರಾಮ ಪಂಚಾಯತನ ಕಂಪ್ಯೂಟರ್ ಆಪರೇಟರ್,
ಸಿಹೆ??? ಹೋಣ್ಣ ರೋಸ್ ಅನುಷಾ, ಸಂಯೋಜಕರಾದ ಸುಜಾತ, ಕಾರ್ಯದರ್ಶಿಗಳಾದ ಸುನಿಲ್ ಕುಮಾರ್, ಬಸವರಾಜ್, ಪಂಚಾಯತ ಸಿಬ್ಬಂದಿಗಳು,ಬೀದರ ತಾಲ್ಲೂಕ ಪಂಚಾಯತ ಐಇಸಿ ಸಂಯೋಜಕರು ಸತ್ಯಜೀತ್
ಹಾಗೂ ನರೇಗಾ ಕೂಲಿ ಕಾರ್ಮಿಕರೂ ಉಪಸ್ಥಿತರಿದ್ದರು.