ಆನೇಕಲ್.ಜೂ.೧೯:ಪ್ರತಿಯೊಬ್ಬರು ಸಮಾಜ ಸೇವೆಯಲ್ಲಿ ತೊಡಗಿಕೊಸಿಕೊಂಡು ಜೀವನದ ಸಾರ್ಥಕತೆ ಕಂಡುಕೊಳ್ಳಬೇಕು. ಸಮಾಜ ಸೇವೆಗಳಲ್ಲಿ ತನು, ಮನದ ಸೇವೆಗಳು ಶ್ರೇಷ್ಠತೆಯನ್ನು ಪಡೆದುಕೊಂಡಿವೆ ಎಂದು ನೆಮ್ಮದಿ ಪೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷ ಆರ್. ಸುಬ್ರಮಣಿ ರವರು ತಿಳಿಸಿದರು.
ಅವರು ಹೊಸರೋಡ್ ನಲ್ಲಿರುವ ನೆಮ್ಮದಿ ಪೌಂಡೇಷನ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಮತ್ತು ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಪಲಾಪೇಕ್ಷೆ ಇಟ್ಟುಕೊಳ್ಳದೆ ಸಮಾಜದ ಅಭಿವೃದ್ದಿ ಗೋಸ್ಕರ ದುಡಿಯುತ್ತಿರುವ ಕಾರ್ಮಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಈನಿಟ್ಟಿನಲ್ಲಿ ನೆಮ್ಮದಿ ಪೌಂಡೇಷನ್‌ನ ಮೂರನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ರುದ್ರಭೂಮಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಸಲಕರಣೆಗಳನ್ನು ವಿತರಿಸಿ ಅವರನ್ನು ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಮಾಜ ಸೇವಕರಾದ ಹೊಸ ರೋಡ್ ಶಿವರಾರೆಡ್ಡಿ ಮಾತನಾಡಿ ಹಣವಿದ್ದರೇ ಮಾತ್ರ ಸೇವೆ ಮಾಡಬಹುದು ಎಂಬ ಮನೋಭಾವನೆಯಿಂದ ಹೊರಬಂದು, ತನು, ಮನ ಸೇವೆ ಸಲ್ಲಿಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು ಎಂದರು. ನೆಮ್ಮದಿ ಪೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷ ಆರ್. ಸುಬ್ರಮಣಿ ರವರು ಕಳೆದ ಹತ್ತಾರು ವರ್ಷಗಳಿಂದ ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಕಾರ್ಮಿಕರ ಮತ್ತು ಮಹಿಳೆಯರ ಸಬಲೀಕರಣಕ್ಕೆ ಸಂಬಂದಿಸಿದ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು ಭಗವಂತ ಆರ್. ಸುಬ್ರಮಣಿ ರವರಿಗೆ ಇನ್ನಷ್ಠು ಸೇವೆ ಮಾಡುವಂತಹ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು. ಇದೇ ಸಂಧರ್ಭದಲ್ಲಿ ನೆಮ್ಮದಿ ಪೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷ ಆರ್. ಸುಬ್ರಮಣಿ ರವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಬಿ.ರಾಮಯ್ಯ, ಗಲಗಲಿ ಸಾರ್, ಮಾರುತಿ, ಕಾರ್ತಿಕ್, ಎಸ್.ರಘು, ನಾಗರಾಜ್, ನಾರಾಯಣಪ್ಪ ಮತ್ತು ನೆಮ್ಮದಿ ಪೌಂಡೇಷನ್ ಪದಾದಿಕಾರಿಗಳು ಭಾಗವಹಿಸಿದ್ದರು.