ಕೂಲಿಕಾರ್ಮಿಕರಿಗೆ 118ತರಕಾರಿ ಕಿಟ್ ವಿತರಿಸಿದ ಸ್ನೇಹಿತರ ಬಳಗ

ಕೂಡ್ಲಿಗಿ.ಜೂ. 9:-ಪಟ್ಟಣದಲ್ಲಿ ಕೋವಿಡ್ ಲಾಕ್ ಡೌನ್ ನಿಂದ ಕಷ್ಟದಲ್ಲಿರುವ ಕಾರ್ಪೆಂಟರ್ ಸೇರಿದಂತೆ ಬಡ ಕೂಲಿಕಾರ್ಮಿಕರಿಗೆ ಮಂಗಳವಾರ 118ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು. ಬೆಂಗಳೂರಿನ ಐ ಕೇರ್ ಫೌಂಡೇಶನ್ ಇವರ ವತಿಯಿಂದ ಕೂಡ್ಲಿಗಿ ಸ್ನೇಹಿತರ ಬಳಗದ ಸಂಯುಕ್ತ ಆಶ್ರಯದಲ್ಲಿ ದಿನನಿತ್ಯ ಬಳಸುವ ತರಕಾರಿಗಳ 118 ಕಿಟ್ ಗಳನ್ನು ಕಾರ್ಪೆಂಟರ್, ಕೂಲಿ ಕಾರ್ಮಿಕರು. ಕಡು ಬಡವರಿಗೆ ಹಂಚಲಾಯಿತು. ಇದೇ ಸಂದರ್ಭದಲ್ಲಿ. ಸ್ನೇಹಿತರ ಬಳಗದ. ಅಧ್ಯಕ್ಷರಾದ ಅಬ್ದುಲ್ ರಹಮಾನ್ ಮಾತನಾಡಿ ಕೊರೋನಾ ಎಂಬ. ಮಹಾಮಾರಿಯಿಂದ ಸರ್ವ ಜನರನ್ನು. ಪರಮಾತ್ಮ ರಕ್ಷಿಸಲಿ ವಿಶ್ವವನ್ನು ಬಿಟ್ಟು ಕೊರೋನಾ ಎಂಬ ಮಹಾಮಾರಿ ತೊಲಗಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು ಸ್ನೇಹಿತರಾದ ಫಯಾಜ್ ಅಲ್ತಾಫ್ ಮತ್ತು ಕಾರ್ಪೆಂಟರ್ ಸಂಘದ .ಅಧ್ಯಕ್ಷ ರಾಘವೇಂದ್ರ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.