ಕೂಲಿಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲು ಆಗ್ರಹ

ಜೇವರ್ಗಿ:ಅ.10: : ಹಿಂದಿನ ಸರಕಾರದಲ್ಲಿ ಕೂಲಿ ಕಾರ್ಮಿಕರಿಗೆ ಉಚಿತ್ ಬಸ್ಸ್ ಪಾಸ್ ನೀಡಲಾಗಿತ್ತು. ಅದನ್ನ ಮತ್ತೆ ಜಾರಿಗೆ ತಂದು ಬಡ ಕೂಲಿಕಾರ್ಮಿಕರಿಗೆ ಅನುಕುಲಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಘದ ರಾಜ್ಯ ಕಾರ್ಯಧ್ಯಕ್ಷರಾದ ದೇವೇಂದ್ರ ಈ ತಳವಾರ ಆಗ್ರಹಿಸಿದರು.

ಪಟ್ಟಣದ ತಹಸೀಲ್ ಆವರಣದಲ್ಲಿ ಗ್ರೇಡ್ 2 ತಹಸೀಲ್ದಾರ್ ಪ್ರಸನಕುಮಾರ ಮೊಘೆಕರ್ ರವರ ಮುಖಾಂತರ ಕರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.

ದೇವೇಂದ್ರ ಈ ತಳವಾರ ಮಾತನಾಡಿ ಹಿಂದಿನ ಸರಕಾರದಲ್ಲಿದ್ದ ಕೂಲಿಕಾರ್ಮಿಕರಿಗೆ ಉಚಿತ್ ಬಸ್ಸ್ ಪಾಸ್ ಮುಂದುವರಿಸಬೇಕು. ಉತ್ತರ ಕರ್ನಾಟಕದಲ್ಲಿ ಇಲಖೆಯ ಸವಲತ್ತುಗಳು ಕಾರ್ಮಿಕರಿಗೆ ನೀಡುವಲ್ಲಿ ಅಧೀಕಾರಿಗಳ ನಿರ್ಲಕ್ಷ ತೋರಿಸುತ್ತಿರುವವವರ ವಿರುದ್ದ ಸುಕ್ತ ಕ್ರಮ ಕೈಗೊಳ್ಳಬೇಕು. ತಮ್ಮ ಸರಕಾರ ಅಧೀಕಾರಕ್ಕೆ ಬಂದ ನಂತರ ಈ ಸೌಲಭ್ಯಗಳನ್ನ ಸ್ಥಗಿತ ಗೊಳಿಸಲಾಗಿದ್ದು, ಇದರಿಂದ ಕೂಲಿಕಾರ್ಮಿಕರು ಕುಲಿ ಕೆಲಸಕ್ಕಾಗಿ ಹೊಗುವುದಕ್ಕೆ ಅನಾನುಕಲಾವುತ್ತಿದೆ.

ಸರಕಾರ ಮತ್ತೆ ಸದರಿ ಸೌಲಬ್ಯವನ್ನು ಮುಂದುವರಿಸಬೇಕು. ಕಾರ್ಮಿಕ ಇಲಾಖೆಯ ಯೋಜನೇಗಳಾದ ಕಾರ್ಮಿಕರ ಕಿಟ್, ವಸತಿ ಸೌಲಬ್ಯಗಳು ಸೇರಿದಂತೆ ಅನೇಕ ಸೌಲಬ್ಯಗಳು ದುಡಿಯುವ ನಿಜವಾದ ಅಸಂಘಟಿತ ಕೂಲಿ ಕಾರ್ಮಿಕರಿಗೆ ತಲುಪುತ್ತಿಲ್ಲಾ. ಉತ್ತರ ಕರ್ನಾಟಕದ ಕಾರ್ಮಿಕರಿಗೆ ಅನೂಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕ. ಕಾ. ರಾ. ಕಾರ್ಯದರ್ಶಿ ಮಲ್ಲಣ್ಣಗೌಡ ರಾಯಚೂರ ಜಮಖಂಡಿ, ಮರೆಪ್ಪ ಖಂಡಾಳಕರ್ ಗುಡೂರ, ಮೈಹೀಬುಬ್ ಕಂಬಾರ, ಚಂದ್ರಕಾಂತ ತಳವಾರ, ಲಗಮಣ್ಣ ಕೂಟನೂರ, ವಿರೇಶ ತಳವಾರ, ಗುರಣ್ಣ ಬಡಿಗೇರ, ಗುರು ಜೈನಾಪೂರ ಉಪಸ್ಥಿತರಿದ್ದರು.