
ಹಟ್ಟಿಚಿನ್ನದಗಣಿ,ಜು.೦೮-
ವೀರಾಪೂರು ಗ್ರಾಮದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಡಿಓ ಗುರುಸಿದ್ದಪ್ಪ ಅವರು ಪ್ರತಿಭಟನ ನಿರತರ ಬೇಡಿಕೆಗಳನ್ನು ಈಡೇರಿಸುತ್ತೇವೆ ದಯಮಾಡಿ ಪ್ರತಿಭಟನೆಯನ್ನು ಕೈ ಬಿಡಲು ಮನವಿ ಮಾಡಿದರು.
ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಕಾರ್ಮಿಕರಿಗೆ ಸರಿಯಾಗಿ ಏನ್‌ಎಂಆರ್ ತೆಗೆಯುತ್ತಿಲ್ಲ. ಕಂಪ್ಯೂಟರ್ ಆಪೇಟರ್ ಸರಿಯಾಗಿ ಪಂಚಾಯ್ತಿಗೆ ಬರುತ್ತಿಲ್ಲ. ಹಾಗೂ ಸರಿಯಾಗಿ ಕರೆಗಳನ್ನೂ ಸ್ವೀಕರಿಸುತ್ತಿಲ್ಲ. ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಎರಡು ಮೂರು ವರ್ಗಗಳು ಕಳೆದರು ಜಾಬ್ ಕಾರ್ಡ್ ನೀಡಿಲ್ಲ. ಯೋಜನೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಪರೇಟರ್ ಹಳ್ಳ ಹಿಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಕೆಲಸದ ಸ್ಥಳಗಳಲ್ಲಿ ಮೂಲಭೂತ ಸೌಕರ್ಯವನ್ನು ನೀಡುತ್ತಿಲ್ಲ. ಹಿಂಗು ಗುಂಡಿ, ದನದ ಶೆಡ್ಡು, ಇತರೆ ಕೆಲಸದ ಸಾಮಗ್ರಿ ಬಿಲ್ ಆಗಿರುವುದಿಲ್ಲ. ಮೇಟ್ ಗಳಿಗೆ ಮೆಟ್ ಕಾರ್ಡ್ ವಿತರಣೆ ಮಾಡಿಲ್ಲ. ಎಲ್ಲಾ ಸಮಸ್ಯೆಗಳನ್ನು ಅತ್ಯಂತ ಮಾಡಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ ವೀರಾಪೂರ್, ಖುಷಿ ಕೂಲಿಕಾರ ಸಂಘಟನೆಯ ತಾಲೂಕು ಮುಖಂಡ ಲಿಂಗರಾಜ್ ದೇಸಾಯಿ, ನಿಂಗಪ್ಪ ಎಂ, ನಿಂಗಮ್ಮ, ಹಸನ್ ಸಾಬ್, ಬೆಟ್ಟಪ್ಪ, ಸಿದ್ದಮ್ಮ, ಬಿಯಮ್ಮ, ಬಸ್ಸಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.