ಕೂಲಿಕಾರರೊಂದಿಗೆ ಉಪಹಾರ ಸವಿದ ಅಧಿಕಾರಿ

ಗದಗ,ಏ8 : ಗದಗ ಜಿಲ್ಲೆಯ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ನರೇಗಾ ಕೂಲಿ ಕಾರ್ಮಿಕರೊಂದಿಗೆ ಬಿಸಿಲಲ್ಲಿ ನೆಲದ ಮೇಲೆ ಕುಳಿತು ಉಪಹಾರ ಸವಿದರು.
ರೋಣ ತಾಲೂಕಿಗೆ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ನಿಯೋಜನೆಗೊಂಡಿರುವ ರವಿ.ಎ.ಎನ್ ಅವರು ಆ ಅಧಿಕಾರಿ. ಗುರುವಾರ ಅಬ್ಬಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಬೆಳಗಿನ ಸಮಯಕ್ಕೆ ಕೆಲಸಕ್ಕೆ ಬಂದಿದ್ದ ನರೇಗಾ ಕಾರ್ಮಿಕರು ದಣಿದು ತಾವು ತಂದಿದ್ದ ಉಪಹಾರ ಸೇವನೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಬ್ಬಿಗೇರಿ ಗ್ರಾಮದ ಮಹಿಳಾ ಕೆಲಸಗಾರರಾದ ಶಾಂತವ್ವ ಹಂಚಿನಾಳ, ಕವಿತಾ ನಾಯ್ಕರ ಊಟ ಮಾಡಿ ಬನ್ನಿ ಸರ್ ಅಂತಾ ಕರೆದಿದ್ದಾರೆ. ಆಗ ಮುಜುಗರ ಪಡದೆ ಅವರ ಆಹ್ವಾನವನ್ನು ಸ್ವೀಕರಿಸಿದ ಕಾರ್ಯನಿರ್ವಾಹಕ ಅಧಿಕಾರಿ ರವಿ ಎ.ಎನ್ ಅವರು ಕಾರ್ಮಿಕರ ಜೊತೆ ನೆಲದ ಮೇಲೆ ಬಿಸಿಲಲ್ಲೇ ಕುಳಿತು ಉಪ್ಪಿಟ್ಟು, ಮಂಡಕ್ಕಿ, ರವಾ ಉಂಡಿ, ಬಾಳೆ ಹಣ್ಣು ಸವಿದು ಸರಳತೆ ಮೆರೆದರು. ಅಬ್ಬಿಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾಲಾಶ್ರೀ ಅಮ್ಮನ್ನವರ, ಇಂಜನೀಯರ ಅಜಯ ಅಬ್ಬಿಗೇರಿ, ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ಸಹಾಯಕ ನಿರ್ದೇಶಕರಾದ ರಿಯಾಜ ಖತೀಬ್, ಅಬ್ಬಿಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾಲಾಶ್ರೀ ಅಮ್ಮನ್ನವರ,Iಇಅ ಮಂಜುನಾಥ, ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ಇಂಜಿನಿಯರ್ ಅಜಯ ಅಬ್ಬಿಗೇರಿ, ಃಈಖಿ ಪ್ರಕಾಶ ಅಂಬಕ್ಕಿ, ಗ್ರಾಮ ಕಾಯಕ ಮಿತ್ರರಾದ ಕಾವೇರಿ ಅಸೂಟಿ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.